Select Your Language

Notifications

webdunia
webdunia
webdunia
webdunia

ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಮಲ್ಲಿಕಾರ್ಜುನ ಖರ್ಗೆ ಬೇಸರ

Mallikarjun Kharge

Krishnaveni K

ಬೆಂಗಳೂರು , ಸೋಮವಾರ, 28 ಜುಲೈ 2025 (11:20 IST)

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದರೂ ಎಸ್ ಎಂ ಕೃಷ್ಣರಿಂದಾಗಿ ನನಗೆ ಸಿಎಂ ಸ್ಥಾನ ಸಿಗಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ಹೊರಹಾಕಿದ್ದಾರೆ.

1999 ರಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಹಗಲಿರುಳು ದುಡಿದರೂ ಕೊನೆಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲ. ಕೇವಲ 4 ತಿಂಗಳ ಹಿಂದೆ ಪಕ್ಷಕ್ಕೆ ಬಂದ ಎಸ್ಎಂ ಕೃಷ್ಣಗೆ ಸಿಎಂ ಸ್ಥಾನ ಸಿಕ್ಕಿತು. ನಾನು ಪಕ್ಷವನ್ನು ಅಧಿಕಾರಕ್ಕೆ ತರಲು ಪಟ್ಟಿದ್ದ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು 26 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ವಿಜಯಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಪಕ್ಷವನ್ನು ಗೆಲ್ಲಿಸಿದ್ದೆ. ಆದರೆ ನನಗೇನೂ ಸಿಗಲಿಲ್ಲ ಎಂದಿದ್ದಾರೆ. ಆಗ ಎಸ್ಎಂ ಕೃಷ್ಣ ಸಿಎಂ ಆದರೆ ಮಲ್ಲಿಕಾರ್ಜುನ ಖರ್ಗೆ ಗೃಹಸಚಿವರಾಗಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಜೀವನದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಖರ್ಗೆ ಮನದಾಳ ಬಿಚ್ಚಿಟ್ಟಿದ್ದಾರೆ. ರಜಾಕರು ನಮ್ಮ ಮನೆ ಸುಟ್ಟು ಹಾಕಿದ್ದರು. ಆಗ ಅವರ ದಾಳಿಯಿಂದ ಕಾಪಾಡಿಕೊಳ್ಳಲು ತಂದೆ ಜೊತೆ ಮಹಾರಾಷ್ಟ್ರಕ್ಕೆ ಹೋಗಿದ್ದೆ. 800 ಜನರು ಸಜೀವ ದಹವಾಗಿದ್ದರು. ನನ್ನನ್ನು ಬದುಕಿಸಲು ಪೂನಾಗೆ ಕರೆದುಕೊಂಡು ಹೋದ್ದರು. ಪೂನಾದಲ್ಲಿ ಚಿಕ್ಕಪ್ಪ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪೂನಾಗೆ ಹೋಗಿದ್ದಾಗ ಅವರು ಅಲ್ಲಿರಲಿಲ್ಲ. ಬಳಿಕ ಕಲಬುರಗಿಗೆ ಬಂದೆವು ಎಂದು ಅವರು ನೆನಪಿಸಿಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಮಕ್ಳು ಸೇಫ್ಟಿಗಾಗಿ ತಪ್ಪದೇ ಈ ಆಪ್ ಡೌನ್ ಲೋಡ್ ಮಾಡಿ