Publish Date: Tue, 06 Jun 2017 (10:44 IST)
Updated Date: Tue, 06 Jun 2017 (10:46 IST)
ಬೆಂಗಳೂರು: ಪ್ರತಿಪಕ್ಷಗಳ ಎಲ್ಲಾ ಆರೋಪಗಳಿಗೂ, ಅನುಮಾನಗಳಿಗೂ ಸದನದಲ್ಲೇ ಉತ್ತರಿಸುತ್ತೇನೆ. ಮಾಧ್ಯಮಗಳ ಮುಂದೆ ಏನೂ ಹೇಳಿಕೆ ನೀಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬರ ಪರಿಹಾರ ಕುರಿತು ಸರ್ಕಾರದ ಕ್ರಮಗಳ ಬಗ್ಗೆ ವಿಪಕ್ಷಗಳು ಪದೇ ಪದೇ ಮಾಧ್ಯಮಗಳ ಮೂಲಕ ಪ್ರಶ್ನೆ ಮಾಡುತ್ತಲೇ ಇವೆ. ಅಲ್ಲದೆ ಇದೀಗ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಬರ ಪರಿಹಾರದ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳು ಸಜ್ಜಾಗಿವೆ.
ಈ ಹಿನ್ನಲೆಯಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಮೇಲಿನಂತೆ ಉತ್ತರಿಸಿದ್ದಾರೆ. ಅಲ್ಲದೆ, ಖಾಲಿ ಇರುವ ಸಚಿವ ಸ್ಥಾನಗಳ ನೇಮಕಾತಿ ಬಗ್ಗೆ ಪ್ರಶ್ನಿಸಿದಾಗಲೂ ಅಧಿವೇಶನ ಮುಗಿದ ಬಳಿಕ ತೀರ್ಮಾನಿಸುವುದಾಗಿ ಜಾರಿಕೊಂಡರು.