Webdunia - Bharat's app for daily news and videos

Install App

ಪತ್ನಿ ಅಂದ್ರೆ ಹೀಗಿರಬೇಕು: ಪತಿ ಅಂಬರೀಶ್‌ಗೆ ವಿಸ್ಕಿ ಬಾಟಲ್ ಇಟ್ಟು ಪೂಜಿಸಿದ ಸುಮಲತಾ

Webdunia
ಮಂಗಳವಾರ, 29 ಜನವರಿ 2019 (17:29 IST)
ದಿವಂಗತರಾದವರಿಗೆ ಇಷ್ಟವಾದ ವಸ್ತು, ಆಹಾರವಿಟ್ಟು ಪೂಜಿಸುವುದು ವಾಡಿಕೆ. ಆದರೆ, ಜನಸಾಮಾನ್ಯರು ಇಹಲೋಕ ತ್ಯಜಿಸಿದಾಗ ಅವರಿಗೆ ಯಾವ ರೀತಿ ವಸ್ತುಗಳನ್ನು ಇಟ್ಟು ದಿನ ಮಾಡಿದರೆ ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ, ಗಣ್ಯ ವ್ಯಕ್ತಿಗಳು ದಿವಂಗತರಾದಾಗ ಏನು ನಡೆಯುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿ ಇರುತ್ತದೆ.
ನಟಿ ಸುಮಲತಾ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ಒಂದು ಕಾಲಕ್ಕೆ ಪಂಚಭಾಷೆ ತಾರೆಯಾಗಿ ಮಿಂಚಿ ಖ್ಯಾತ ನಟಿಯಾಗಿದ್ದವರು. ಪತಿ ಅಂಬರೀಷ್ ಖ್ಯಾತ ನಟ, ರಾಜಕಾರಣಿ, ಕೇಂದ್ರ ಸಚಿವ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಮಿಂಚಿ ರಾಜ್ಯದಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದವರು.
 
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅಂಬರೀಶ್ ಕೊನೆಗೆ ಇಹಲೋಕ ತ್ಯಜಿಸಿದರು. ಪತಿಯ ಅಗಲುವಿಕೆಯನ್ನು ಸಹಿಸದ ಸುಮಲತಾ ಪತಿಗೆ ಇಷ್ಟವಾದ ಮದ್ಯದ ಬಾಟಲಿ, ನೀರಿನ ಬಾಟಲಿ, ಆಹಾರವನ್ನು ಅಂಬರೀಷ್ ಫೋಟೋ ಮುಂದಿಟ್ಟು ಪೂಜಿಸಿದ್ದಾರೆ.   
 
ಪತಿ ಅಂಬರೀಶ್ ಫೋಟೋ ಮುಂದೆ ಮದ್ಯದ ಬಾಟಲಿ ಇಟ್ಟು ಸುಮಲತಾ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಪ್‌‌ಗಳಲ್ಲಿ ಪ್ರಮುಖ ಹಾಟ್ ಸುದ್ದಿಯಾಗಿ ಹೊರಹೊಮ್ಮಿದೆ. ಪತಿಯ ನಿಧನದ ನಂತರ ಅವರಿಗೆ ಇಷ್ಟವಾದ ವಸ್ತುಗಳನ್ನು ಇಟ್ಟು ಪೂಜಿಸುವುದು ಸಂಪ್ರದಾಯವಾಗಿದೆ. ಆದರೆ, ಜನಪ್ರತಿನಿಧಿಯಾಗಿದ್ದ ಮಾಜಿ ಸಚಿವ ಅಂಬರೀಷ್ ಇತರ ಜನರಿಗೆ ಮಾದರಿಯಾಗುವಂತೆ ಇರಬೇಕು ಎನ್ನುವುದು ಜನತೆಯ ಅಭಿಪ್ರಾಯವಾಗಿದೆ. ಇಂತಹ ಸಂದರ್ಭದಲ್ಲಿ ಪತಿ ಅಂಬರೀಶ್‌ಗೆ ಮದ್ಯದ ಬಾಟಲಿಯಿಟ್ಟು ಪೂಜಿಸಿದ ಸುಮಲತಾ ಕಾರ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಾಧಿಕಾರಿ ಏನು ದಾವುದ್ ಇಬ್ರಾಹಿಂ ನಾ, ಇದೆಲ್ಲ ವ್ಯವಸ್ಥಿತ ಸಂಚು: ಪ್ರತಾಪ್ ಸಿಂಹ ಆಕ್ರೋಶ

ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ದರು: ಆರಗ ಜ್ಞಾನೇಂದ್ರ

ರಾಹುಲ್ ಗಾಂಧಿ ಅವರ ದಿಟ್ಟ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಸಿಎಂ ಡಿ.ಕೆ. ಶಿವಕುಮಾರ್

ಮತಗಳ್ಳತನ, ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕತೆಯಿಲ್ಲ: ಸಿದ್ದರಾಮಯ್ಯ

ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ: ಪ್ರಧಾನಿ, ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಗುಡುಗಿದ ರಾಹುಲ್‌

ಮುಂದಿನ ಸುದ್ದಿ
Show comments