Select Your Language

Notifications

webdunia
webdunia
webdunia
webdunia

ಪತ್ನಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಪತಿ ಫಿನಿಶ್

ಪತ್ನಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಪತಿ ಫಿನಿಶ್
ಬೆಂಗಳೂರು , ಶನಿವಾರ, 6 ಮೇ 2017 (18:49 IST)
55 ವರ್ಷ ವಯಸ್ಸಿನ ಪತಿ ಮಾನ್‌ಸಿಂಗ್‌‌ನನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಉಸಿರುಗಟ್ಟಿಸಿ ಹತ್ಯೆಗೈದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
 
ಜೆ.ಸಿ.ನಗರದ ನಿವಾಸಿಯಾಗಿದ್ದ ಚಂದ್ರಬಾಯಿ ತನ್ನ ಪ್ರಿಯಕರ ಅಶೋಕ್‌ನೊಂದಿಗೆ ಸೇರಿ ಪತಿ ಮಾನ್‌ಸಿಂಗ್‌ನನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ. ನಂತರ ಶವವನ್ನು ಸಾಗಿಸುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ.
 
44 ವರ್ಷ ವಯಸ್ಸಿನ ಚಂದ್ರಬಾಯಿ ಮತ್ತು 39 ವರ್ಷ ವಯಸ್ಸಿನ ಅಶೋಕ್ ಮಧ್ಯೆ ಅನೈತಿಕ ಸಂಬಂಧವಿತ್ತು. ಸದಾ ಮನೆಗೆ ಬರುತ್ತಿದ್ದ ಅಶೋಕ್ ಬಗ್ಗೆ ಪತಿ ಮಾನ್‌ಸಿಂಗ್ ಪ್ರಶ್ನಿಸಿದ್ದರಿಂದ, ಆತನನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಆರೋಪಿಗಳು ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ.
 
ಚಂದ್ರಬಾಯಿ ನಡುವಳಿಕೆಯಿಂದ ಅನುಮಾನಗೊಂಡ ನೆರೆಹೊರೆಯವರು ಜೆ.ಸಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋಣಿಚೀಲದಲ್ಲಿ ಯಾವುದೋ ವಸ್ತುವನ್ನು ತೆಗೆದುಕೊಂಡು ಸ್ಮಶಾನದತ್ತ ಹೋಗಿದ್ದಾಳೆ ಎನ್ನುವ ವಿವರಣೆ ಪಡೆದ ಪೊಲೀಸರು ಸ್ಮಶಾನಕ್ಕೆ ತೆರಳಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಕಾರ್ಯಕಾರಿಣಿಯಲ್ಲಿ ಈಶ್ವರಪ್ಪಗೆ ಗೋಷ್ಠಿ ನಿಗದಿ