Publish Date: Thu, 13 Feb 2020 (15:06 IST)
Updated Date: Thu, 13 Feb 2020 (15:15 IST)
ಈಗಿನ ಪರಿಸ್ಥಿಯಲ್ಲಿ ಖಾಸಗೀಕರಣ ಎಲ್ಲ ಕಡೆ ಇದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಸಿಗಬೇಕು ಅನ್ನೊ ಬೇಡಿಕೆ ಸಾಮಾನ್ಯವಾಗಿದೆ.
ಹೀಗಂತ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದು, ಬಂದ್ ಗೆ ನಾವು ಬೆಂಬಲ ಕೊಟ್ಟಿದ್ದೇವೆ ಎಂದಿದ್ದಾರೆ.
ಸರ್ಕಾರ ಬಂದ್ ಮಾಡುವವರನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಆದ್ರೆ ಅವರೊಂದಿಗೆ ಮಾತನಾಡಲು ಕೂಡ ಸರ್ಕಾರ ತಯಾರಿಲ್ಲ ಎಂದು ದೂರಿದ್ದಾರೆ.
ಚರ್ಚೆ ಮಾಡಿದ್ರೆ ತಾನೇ ಸಮಸ್ಯೆ ಬಗೆ ಹರಿಯೋದು? ಆದರೆ ಸರ್ಕಾರ ಚರ್ಚೆ ಮಾಡಲು ತಯಾರಿಲ್ಲ. ಖಾಸಗಿ ಕಂಪೆನಿಯವರೊಂದಿಗೆ ಕೂಡ ಚರ್ಚೆ ಮಾಡಬೇಕು. ಸ್ಥಳೀಯರಿಗೆ ಕೆಲಸ ಕೊಡಲು ಸಮಸ್ಯೆ ಏನು ಅಂತಾ ಕೇಳಬೇಕು.
ಇನ್ನು ಈ ವರದಿಯಲ್ಲಿ ಎಷ್ಟು ಅನುಷ್ಠಾನಕ್ಕೆ ತರಬಹುದು ಅಂತಾ ಚರ್ಚಿಸಬೇಕು ಅಂತ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.