Select Your Language

Notifications

webdunia
webdunia
webdunia
webdunia

ಮದ್ಯ ಮಾರಾಟದ ಅವಧಿ: ಅಂದು ವಿರೋಧಿಸಿದ್ದ ಮೋಟಮ್ಮ ಇಂದು ಯಾಕೆ ಮೌನ: ರೇಣುಕಾಚಾರ್ಯ

ಮದ್ಯ ಮಾರಾಟದ ಅವಧಿ: ಅಂದು ವಿರೋಧಿಸಿದ್ದ ಮೋಟಮ್ಮ ಇಂದು ಯಾಕೆ ಮೌನ: ರೇಣುಕಾಚಾರ್ಯ
ಬೆಂಗಳೂರು , ಬುಧವಾರ, 3 ಆಗಸ್ಟ್ 2016 (13:02 IST)
ನಾವು ಅಬಕಾರಿ ಖಾತೆ ಸಚಿವನಾಗಿದ್ದ ಸಮಯದಲ್ಲಿ ಮದ್ಯದ ಅಂಗಡಿ ಸಮಯ ವಿಸ್ತರಣೆ ಮಾಡಲು ಕಾಂಗ್ರೆಸ್ ನಾಯಕಿ ಮೋಟಮ್ಮ ವಿರೋಧಿಸಿದ್ದರು. ಆದರೆ, ಈಗ ಅವರೇಕೆ ಮೌನವಾಗಿದ್ದಾರೆ ಎಂದು ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಸಚಿವರಾದ ಎಚ್‌.ವೈ.ಮೇಟಿ ಅವರು ರಾಜಧಾನಿ ಬೆಂಗಳೂರಿನಲ್ಲಿ ಮದ್ಯದ ಅಂಗಡಿ ಸಮಯವನ್ನು ರಾತ್ರಿ ಒಂದು ಗಂಟೆಯವರೆಗೂ ವಿಸ್ತರಣೆ ಮಾಡಿದ್ದಾರೆ. ಆದರೆ, ನಾವು ಅಬಕಾರಿ ಖಾತೆ ಸಚಿವನಾಗಿದ್ದ ಸಮಯದಲ್ಲಿ ಮದ್ಯದ ಅಂಗಡಿ ಸಮಯ ವಿಸ್ತರಣೆ ಮಾಡಲು ಕಾಂಗ್ರೆಸ್ ನಾಯಕಿ ಮೋಟಮ್ಮ ವಿರೋಧಿಸಿದ್ದರು. ಈಗ ಮೋಟಮ್ಮ ಏಕೆ ಮೌನವಾಗಿದ್ದಾರೆ ಎಂದು ತಿಳಿಸಿದರು.
 
ಅಬಕಾರಿ ಸಚಿವರ ಎಚ್‌.ವೈ.ಮೇಟಿ ಅವರು ಗ್ರಾಮೀಣ ಭಾಗದ ಜನರು ಅಶಿಕ್ಷಿತರು, ಅವರು ಕುಡಿದು ತೂರಾಡುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಅವರು ಗ್ರಾಮೀಣ ಭಾಗದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
 
 
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ....
 
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್‌ಗೂ ನನಗೂ ಸಂಬಂಧವಿಲ್ಲ. ಆತ ಯಾರೆಂದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
 
ನನ್ನ ಮನೆಯಲ್ಲಿ ಹಾಗೂ ನನ್ನ ಸಂಬಂಧಿಗಳಲ್ಲಿ ಯಾರು ಪಿಯುಸಿ ವಿಧ್ಯಾರ್ಥಿಗಳಿಲ್ಲ. ಪ್ರಕರಣ ಕುರಿತು ಸಿಐಡಿ ತನಿಖೆಯಾಗಲಿ. ನನ್ನ ಹೆಸರು ಕೆಡಿಸಲು ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ. 
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಸಿಎಂ: ಶಾ ಆಯ್ಕೆ ವಿಜಯ್ ರೂಪಾನಿ, ಅಂತಿಮ ನಿರ್ಧಾರ ಮೋದಿಯದ್ದು