Publish Date: Mon, 07 Sep 2026 (13:38 IST)
Updated Date: Mon, 07 Sep 2026 (13:41 IST)
ರಾಜ್ಯಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಬಿಸಿಲಿನ ಬೇಗೆಗೆ ಬೆದರಿಹೋಗಿದ್ದಾರೆ. ಕೇವಲ ಉತ್ತರ ಕರ್ನಾಟಕದ ಜಿಲ್ಲೆಗಳಷ್ಟೇ ಅಲ್ಲದೆ, ತಂಪಾದ ಹವಾಮಾನಕ್ಕೆ ಹೆಸರಾಗಿದ್ದ ರಾಜಧಾನಿ ಬೆಂಗಳೂರು ಹಾಗೂ ಮಲೆನಾಡು ಭಾಗಗಳಲ್ಲೂ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕದಲ್ಲಿ ತಾಪಮಾನದ ಪ್ರಸ್ತುತ ಪರಿಸ್ಥಿತಿ
ಉತ್ತರ ಕರ್ನಾಟಕ: ಕಲಬುರಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನವು 40°C ನಿಂದ 44°C ವರೆಗೆ ತಲುಪುತ್ತಿದ್ದು, ಹೀಟ್‌ವೇವ್ (ಶಾಖತರಂಗ) ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಒಳನಾಡು ಹಾಗೂ ಬೆಂಗಳೂರು: ಬೆಂಗಳೂರು, ಮೈಸೂರು, ಮಂಡ್ಯ ಮತ್ತು ತುಮಕೂರು ಭಾಗಗಳಲ್ಲಿ ಸಾಮಾನ್ಯಕ್ಕಿಂತ 2°C ನಿಂದ 4°C ಯಷ್ಟು ತಾಪಮಾನ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ 36°C ನಿಂದ 38°C ದಾಟುತ್ತಿದೆ.
ಧಿಡೀರ್ ತಾಪಮಾನ ಏರಿಕೆಗೆ ಪ್ರಮುಖ ಕಾರಣಗಳು
ಎಲ್ ನಿನೋ (El Niño) ಪ್ರಭಾವ: ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರು ಕಾಯುವ ಪ್ರಕ್ರಿಯೆಯಿಂದಾಗಿ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತದೆ. ಇದರ ನೇರ ಪರಿಣಾಮ ಭಾರತ ಹಾಗೂ ಕರ್ನಾಟಕದ ಹವಾಮಾನದ ಮೇಲೆ ಬೀಳುತ್ತಿದ್ದು, ಒಣ ಹವೆ ಹೆಚ್ಚಾಗಿದೆ.
ಆರ್ದ್ರತೆಯ ಕೊರತೆ ಮತ್ತು ಒಣ ಮಾರುತಗಳು: ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಒಣ ಹವೆಯ ಮಾರುತಗಳು ನಿರಂತರವಾಗಿ ಬೀಸುತ್ತಿರುವುದರಿಂದ ಭೂಮಿಯ ಮೇಲ್ಮೈ ಬೇಗನೆ ಕಾಯುತ್ತಿದೆ.
ಮಳೆಯ ಅಭಾವ: ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣದಲ್ಲಾದ ಏರುಪೇರು ಹಾಗೂ ಪೂರ್ವ ಮುಂಗಾರು ಮಳೆ ಸಮರ್ಪಕವಾಗಿ ಬೀಳದಿರುವುದು ಭೂಮಿಯ ತಾಪಮಾನ ಹೆಚ್ಚಲು ಕಾರಣವಾಗಿದೆ.
ನಗರೀಕರಣ ಮತ್ತು ಕಾಂಕ್ರೀಟೀಕರಣ: ಕಾಡುಗಳ ನಾಶ, ನಗರೀಕರಣ, ವಾಹನಗಳ ದಟ್ಟಣೆ ಮತ್ತು ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಹೆಚ್ಚಿರುವುದರಿಂದ ನಗರ ಪ್ರದೇಶಗಳು 'ಅರ್ಬನ್ ಹೀಟ್ ಐಲ್ಯಾಂಡ್' ಗಳಾಗಿ ಬದಲಾಗುತ್ತಿವೆ.
ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಸಲಹೆಗಳು
ಮಧ್ಯಾಹ್ನ 12:00 ರಿಂದ 3:00 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ತಡೆಯಿರಿ.
ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು, ಎಳೆನೀರು, ಮಜ್ಜಿಗೆ ಮತ್ತು ಹಣ್ಣಿನ ರಸಗಳನ್ನು ಸೇವಿಸಿ ನಿರ್ಜಲೀಕರಣದಿಂದ ತಡೆಯಿರಿ
ಬಿಸಿಲಿನಲ್ಲಿ ಹೊರಹೋಗುವಾಗ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಕೊಡೆ ಅಥವಾ ಟೋಪಿ ಬಳಸಿ.
ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಕಡಿಮೆ ಮಾಡಲು ಮರಗಿಡಗಳನ್ನು ಬೆಳೆಸುವುದು ಮತ್ತು ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ