Publish Date: Thu, 25 Apr 2024 (18:25 IST)
Updated Date: Thu, 25 Apr 2024 (18:44 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು, ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಕಾರಣವಾಗಿದೆ.
ಈ ಪೆನ್ ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳು ಹಾಸನದ ದೊಡ್ಡ ಮನೆತನದ, ಯುವರಾಜಕಾರಣಿಯೊಬ್ಬರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ನವರು ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
ಕುಮಾರಸ್ವಾಮಿ ಅವರು ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ಹಳೆಯ ವಿಡಿಯೋವನ್ನು ಹಂಚಿ ಈ ಪ್ರಶ್ನೆ ಕೇಳುತ್ತಿದೆ.
ಕುಮಾರಸ್ವಾಮಿಯವರೇ,
ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ?
ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ?
ಕುಮಾರಸ್ವಾಮಿಯವರೇ,
ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು
ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ?
ಕುಮಾರಸ್ವಾಮಿಯವರೇ, ನೀವು ತೋರಿಸಿ ಜೇಬಿನೊಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ? ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ ಎಂದು ಪ್ರಶ್ನಿಸಿದೆ.