Publish Date: Mon, 15 Jul 2019 (13:54 IST)
Updated Date: Mon, 15 Jul 2019 (13:56 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ದ್ವೇಷಪೂರಿತ ರಾಜಕಾರಣ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಸಿಎಂ ಗಮನ ಕೊಡದೇ ನೀರಿನ ವಿಷಯದಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದ್ರು.
ಮಂಡ್ಯದ ಶಾಸಕರು, ಮಂತ್ರಿಗಳು ಮತ್ತು ಜನರು ಸರ್ಕಾರದ ಜೊತೆ ಚರ್ಚೆ ಮಾಡಿ ಜಿಲ್ಲೆಯ ಸಮಸ್ಯೆ ಪರಿಹರಿಸಲು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಪ್ರಾಧಿಕಾರದತ್ತ ಬೊಟ್ಟು ಮಾಡಲಾಗುತ್ತಿದೆ ಎಂದ್ರು.
ಸಿಎಂ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ತೋರುವ ಕಾಳಜಿಯನ್ನೇ ನೀರಿನ ವಿಷಯ ಹಾಗೂ ಮಂಡ್ಯ ಜನರ ವಿಷಯದಲ್ಲಿ ಕಾಳಜಿ ತೋರಲಿ ಅಂತ ಮಾಜಿ ಸಚಿವರು, ಸಿಎಂರ ಕಾಲು ಎಳೆದಿದ್ದಾರೆ.