Daily Horoscope
✕

ಶಾಸಕ ಸಿಟಿ ರವಿ ಬಗ್ಗೆ ಗಾಯಾಳು ಹೇಳಿದ್ದೇನು?

Webdunia
ಮಂಗಳವಾರ, 19 ಫೆಬ್ರವರಿ 2019 (16:30 IST)
ಶಾಸಕ ಸಿಟಿ ರವಿ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು ಶಾಸಕ ಸಿ ಟಿ ರವಿ. ಹೀಗಂತ ಗಾಯಾಳು ಪುನಿತ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಶ್ನೆ ಮಾಡಿದ್ದಕ್ಕೆ ಸಿ ಟಿ ರವಿ ಬೆಂಬಲಿಗರಿಂದ ಗಾಯಾಳುಗಳ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. ಕುಡಿದು ಚಾಲನೆ ಮಾಡಿದ್ದು ತಪ್ಪಲ್ವಾ? ಅಂದಿದ್ದಕ್ಕೆ  ಕಾರ್ ಹತ್ತು ಹೇಳ್ತಿವಿ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬೆಂಬಲಿಗರನ್ನ ಕರೆಸಿಕೊಂಡ ಸಿ ಟಿ ರವಿ, ಗಾಯಾಳುಗಳನ್ನ ಸೌಜನ್ಯಕ್ಕೂ  ಮಾತನಾಡಿಸದೆ ಸ್ಥಳದಿಂದ ಕಾಲ್ಕಿತ್ತರು ಎಂದು ಗಾಯಾಳು ಆರೋಪ ಮಾಡಿದ್ದಾರೆ. ಸಿ ಟಿ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಯಾಳು ಪುನಿತ್ ಆಗ್ರಹ ಮಾಡಿದ್ದಾರೆ. ಕಳೆದ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದರು. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ನಮಗ್ಯಾಕೆ ತೊಂದರೆ ಕೊಡಬೇಕು..: ವಿಮಾನದಲ್ಲಿ ಅಭಿಜಿತ್ ದೀಪ್ಕೆ ವರ್ತನೆಗೆ ಬೇಸತ್ತ ಸಹಯಾತ್ರಿಕರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆಯಸ್ಸು ಗಟ್ಟಿಯಿತ್ತು ಅದಕ್ಕೇ ಬದುಕಿಕೊಂಡ ಯುವತಿ: ಟ್ರಕ್ ಬಂಪರ್ ಹಿಡಿದು ನೇತಾಡಿದ ವಿಡಿಯೋ ವೈರಲ್

ಅರೆಸ್ಟ್ ಮಾಡ್ರೋ ನನ್ನ… ವಿಮಾನದಲ್ಲೇ ಪೊಲೀಸರು, ಅಭಿಜಿತ್ ದೀಪ್ಕೆ ನಡುವೆ ಹೈಡ್ರಾಮಾ Video

ಮುಂದಿನ ಸುದ್ದಿ
Show comments