Publish Date: Thu, 07 Feb 2019 (14:47 IST)
Updated Date: Thu, 07 Feb 2019 (14:48 IST)
ಬಜೆಟ್ ಪ್ರತಿಯನ್ನು ಸಿಎಂ ಸಂಪೂರ್ಣ ಓದಿ ಮುಗಿಸಿದ ಬಳಿಕ ಎಲ್ಲಾ ಸದಸ್ಯರಿಗೆ ವಿತರಣೆ ಮಾಡಬೇಕು ಎನ್ನುವ ತೀರ್ಮಾನ ವಿರೋಧಿಸಿ ಸ್ಪೀಕರ್ ಗೆ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್‌ನ ಪ್ರತಿಯನ್ನು ವಿಧಾನಸಭೆಯಲ್ಲಿ ಸಂಪೂರ್ಣ ಓದಿ ಮುಗಿಸಿದ ನಂತರ ಎಲ್ಲ ಸದಸ್ಯರುಗಳಿಗೂ ವಿತರಿಸಬೇಕು ಎನ್ನುವ ತೀರ್ಮಾನಕ್ಕೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಭಾಧ್ಯಕ್ಷರಾದ ರಮೇಶ್ಕುಮಾರ್ರವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ಬಜೆಟ್ ಭಾಷಣ ಓದಿದ ನಂತರ ಬಜೆಟ್ ಪ್ರತಿಯನ್ನು ಸದಸ್ಯರಿಗೆ ವಿತರಿಸುವುದು ವಿಧಾನಸಭೆಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಕರ್ನಾಟಕ ವಿಧಾನಸಭೆಯ ಹಿಂದಿನ 14 ವಿಧಾನಸಭೆಯ ಅವಧಿಗಳಲ್ಲಿ ಬಜೆಟ್ ಮಂಡನೆ ದಿನ ಮುಖ್ಯಮಂತ್ರಿಗಳು ಭಾಷಣ ಪ್ರಾರಂಭಿಸಿದ ನಂತರ ಎಲ್ಲ ಸದಸ್ಯರುಗಳಿಗೂ ಅದರ ಪ್ರತಿ ವಿತರಿಸುವ ಸಂಪ್ರದಾಯ ಇದೆ. ಅದೇ ಸಂಪ್ರದಾಯವನ್ನು ಈಗಲೂ ಮುಂದುವರೆಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.