Select Your Language

Notifications

webdunia
webdunia
webdunia
webdunia

ನನ್ನ ವಿರುದ್ಧ ಯಾರೇ ಹೋರಾಟ ಮಾಡಿದರೂ ಸ್ವಾಗತ: ಬಿಎಸ್‌ವೈ

ನನ್ನ ವಿರುದ್ಧ ಯಾರೇ ಹೋರಾಟ ಮಾಡಿದರೂ ಸ್ವಾಗತ: ಬಿಎಸ್‌ವೈ
ಹುಬ್ಬಳ್ಳಿ , ಗುರುವಾರ, 27 ಅಕ್ಟೋಬರ್ 2016 (12:04 IST)
ಕಿಕ್ ಬ್ಯಾಕ್ ಪ್ರಕರಣದಲ್ಲಿ ಕ್ಲೀನ್ ಚಿಟ್ ದೊರೆತ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಯಾರೇ ಕಾನೂನು ಹೋರಾಟ ಮಾಡಿದರೂ ಅದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರಿಗೆ ಟಾಂಗ್ ನೀಡಿದ್ದಾರೆ.
 
ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲಿರುವ ಪ್ರಕರಣದ ಕುರಿತು ಯಾರೇ ಹೋರಾಟ ಮಾಡಿದರು ಸ್ವಾತಗವಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಸಿಬಿಐ ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಇನ್ನೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದರು. 
 
ಟಿಪ್ಪು ಜಯಂತಿ ಆಚರಣೆ ಅವಶ್ಯಕತೆ ಇಲ್ಲ.......
 
ಆಳುವ ಸರಕಾರ ಸಾರ್ವಜನಿಕರ ಆಶೋತ್ತರಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವ ಕೆಲಸಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಅವಶ್ಯಕತೆ ಇಲ್ಲ ಎಂದರು. 
 
ಹಿಂದುಳಿದ ವರ್ಗಗಳ ಸಮಾವೇಶ ನಡೆಸುವ ಜವಾಬ್ದಾರಿಯನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಪುಟ್ಟಸ್ವಾಮಿ ಅವರಿಗೆ ವಹಿಸಿಕೊಡಲಾಗಿದೆ. ಹಿಂದುಳಿದ ವರ್ಗದ ಐತಿಹಾಸಿಕ ಸಮಾವೇಶ ಮಾಡಲು ಬೇಕಾದ ಎಲ್ಲ ಸಂಘಟನಾ ಕಾರ್ಯ ಈಗಾಗಲೇ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ವೀರಶೈವ ಸ್ವಾಮೀಜಿ ಆಸನದ ಮೇಲೆ ಮುಸ್ಲಿಂ ಯುವಕ..!