Select Your Language

Notifications

webdunia
webdunia
webdunia
webdunia

‘ಲೋಕಲ್ ಸಮರ’ದಲ್ಲಿ ಯಾರಿಗೆ ಜಯ?

‘ಲೋಕಲ್ ಸಮರ’ದಲ್ಲಿ ಯಾರಿಗೆ ಜಯ?
ಬೆಂಗಳೂರು , ಗುರುವಾರ, 30 ಡಿಸೆಂಬರ್ 2021 (08:49 IST)
ಬೆಂಗಳೂರು : ರಾಜ್ಯದಲ್ಲಿ ಡಿ.27ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.
 
ವಿಧಾನಮಂಡಲದ ಚಳಿಗಾಲದ ಅಧಿವೇಶನದ ನಡುವೆ ಚುನಾವಣೆ ನಡೆದಿದ್ದ ಕಾರಣ ಪ್ರಚಾರದಲ್ಲಿ ಪಕ್ಷಗಳ ಪ್ರಮುಖ ನಾಯಕರೇ ಭಾಗಿಯಾಗಿರಲಿಲ್ಲ. ಕೇವಲ 3-4 ಸಚಿವರಿಂದಷ್ಟೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು. ಹೀಗಾಗಿ ಸ್ಥಳೀಯ ನಾಯಕರ ಮುತುವರ್ಜಿಯಲ್ಲೇ ಚುನಾವಣೆ ನಡೆದಿತ್ತು.

ಇನ್ನು ರಾಜ್ಯದಲ್ಲಿ ಆಡಳಿತ ಪಕ್ಷವಾಗಿರೋ ಬಿಜೆಪಿ, ಸಹಜವಾಗಿ ಹೆಚ್ಚು ಸ್ಥಾನ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ವಿಪಕ್ಷ ಕಾಂಗ್ರೆಸ್ ಕೂಡ ಹೆಚ್ಚು ಸ್ಥಾನ ಗೆದ್ದು ಪಕ್ಷ ಬಲವರ್ಧನೆ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ತಿದೆ. ಜೆಡಿಎಸ್ ಮಾತ್ರ ಈ ಬಾರಿಯೂ ಅಧಿಕಾರ ಹಿಡಿಯುವಲ್ಲಿ ಕಿಂಗ್ಮೇಕರ್ ಆಗೋ ಲೆಕ್ಕಾಚಾರದಲ್ಲಿದೆ ಎನ್ನಲಾಗ್ತಿದೆ.

ಒಟ್ನಲ್ಲಿ ಇಂದಿನ ಚುನಾವಣಾ ಫಲಿತಾಂಶದ ಮೇಲೆ ಮೂರೂ ಪಕ್ಷಗಳ ಚಿತ್ತ ನೆಟ್ಟಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾರ ಪಾರಮ್ಯ ಎಂಬುದಕ್ಕಷ್ಟೇ ಸೀಮಿತವಾಗಲಿರೋ ಚುನಾವಣೆಯಲ್ಲಿ, ಯಾರಿಗೆ ವಿಜಯ ಮಾಲೆ ಬೀಳುತ್ತೆ ಅನ್ನೋದು ಇನ್ನು ಕೆಲ ಸಮಯದಲ್ಲಿಯೇ ಗೊತ್ತಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚುನಾವಣಾ ಫಲಿತಾಂಶ ಪ್ರಕಟ