ಮಹಿಳೆಯರಿಂದ ಲಂಚ ಪಡೆಯುವಾಗ ಸಿಕ್ಕಿದ್ದು ಯಾರು?

Webdunia
ಶನಿವಾರ, 12 ಸೆಪ್ಟಂಬರ್ 2020 (14:25 IST)
ಮಹಿಳೆಯರಿಂದ ಲಂಚಕ್ಕೆ ಬೇಡಿಯಿಟ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
 

ಹಾವೇರಿ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನಾಲ್ವರು ನೌಕರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಐವರು ಮಹಿಳಾ ಫಲಾನುಭವಿಗಳಿಗೆ ಸಹಾಯಧನದಲ್ಲಿ ಭೂಮಿ ನೀಡುವ ಸಂಬಂಧ, ಅನುಮೋದನೆ ನೀಡಲು ಅಧಿಕಾರಿಗಳು ಒಟ್ಟು 75 ಸಾವಿರ ರೂ. ಲಂಚ ಕೇಳಿದ್ದರು.

ಈ ಸಂಬಂಧ ರಾಣೆಬೆನ್ನೂರು ತಾಲ್ಲೂಕು ಪದ್ಮಾವತಿಪುರದ ಸಿದ್ದಪ್ಪ ಲಮಾಣಿ ದೂರು ನೀಡಿದ್ದರು.
25 ಸಾವಿರ ರೂ. ಲಂಚ ಪಡೆಯುತ್ತಿದ್ದ ಎಫ್‌ಡಿಎ ತಿಪ್ಪೇಸ್ವಾಮಿಯನ್ನು ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಬಂಧಿಸಲಾಯಿತು.

ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್‌, ಫೀಲ್ಡ್‌ ಆಫೀಸರ್‌ ದಾಮೋದರ್‌, ಎಫ್‌ಡಿಎ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ದಿನ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬೇಡಿ ಎನ್ನುವ ತಾಕತ್ತಿದ್ಯಾ ನಿಮಗೆ: ಪುನೀತ್ ಕೆರೆಹಳ್ಳಿ

Karnataka Weather: ಇಂದು ಈ ಜಿಲ್ಲೆಗೆ ಗುಡುಗು ಸಹಿತ ಮಳೆ ಸಾಧ್ಯತೆ

ಮೋದಿ ಆಡಳಿತದಲ್ಲಿ ನಕ್ಸಲಸಿಂ ಕೊನೆಯುಸಿರೆಳೆಯುತ್ತಿದೆ: ಅಮಿತ್ ಶಾ

ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆ: ಸಿಎಂ ಸಿದ್ದರಾಮಯ್ಯ ಹೀಗ್ಯಾಕೆ ಅಂದಿದ್ದು

ದೋಣಿಯೊಳಗೆ ಹಾರಿ ಬಂದು ದೊಡ್ಡ ಮೀನು ಚುಚ್ಚಿ ಮೀನುಗಾರಿಕೆಗೆ ತೆರಳಿದ್ದ ಯುವಕ ಸಾವು

ಮುಂದಿನ ಸುದ್ದಿ
Show comments