Select Your Language

Notifications

webdunia
webdunia
webdunia
webdunia

ಕಣದಲ್ಲಿರುವ ಬಂಡಾಯ ವೀರರು ಯಾರು?

ಕಣದಲ್ಲಿರುವ ಬಂಡಾಯ ವೀರರು ಯಾರು?
ಬೆಂಗಳೂರು , ಮಂಗಳವಾರ, 25 ಏಪ್ರಿಲ್ 2023 (08:29 IST)
ಬೆಂಗಳೂರು : ನಾಮಪತ್ರ ಹಿಂಪಡೆಯುವ ಅವಧಿ ಮುಗಿದಿದ್ದು ಕೊನೆಯ ದಿನ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಪ್ರಮುಖ ಪಕ್ಷಗಳು ಪ್ರಯತ್ನಿಸಿದ್ದವು.

ಕೆಲವೆಡೆ ಬಂಡಾಯ ಶಮನ ಮಾಡುವುದರಲ್ಲಿ ಯಶಸ್ಸು ಕಂಡರೆ ಇನ್ನೂ ಕೆಲವಡೆ ಬಂಡಾಯ ಶಮನವಾಗಲಿಲ್ಲ. ಇದು ಮೂರು ಪಕ್ಷಗಳಿಗೆ ತಲೆ ಬಿಸಿ ಉಂಟು ಮಾಡಿದೆ.

ಮಂಗಳೂರು ಉಳ್ಳಾಲದ  ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಾಲ ಇದ್ದಕ್ಕಿದ್ದಂತೆ ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟು 502 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಮಧ್ಯೆ, ಜೆಡಿಎಸ್ ಮುಖಂಡ ಬೋಜೇಗೌಡ, ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ಪರ ಕೆಲಸ ಮಾಡುವಂತೆ ಕರೆ ನೀಡಿರೋ ದೃಶ್ಯ ವೈರಲ್ ಆಗಿದೆ.

ಕಣದಲ್ಲಿರುವ `ಬಂಡಾಯ’ ವೀರರು

ಮಾಡಾಳ್ ಮಲ್ಲಿಕಾರ್ಜುನ್ – ಚನ್ನಗಿರಿ – ಬಿಜೆಪಿ ಬಂಡಾಯ
ಅರುಣ್ಕುಮಾರ್ ಪುತ್ತಿಲ – ಪುತ್ತೂರು – ಬಿಜೆಪಿ ಬಂಡಾಯ
ಕೃಷ್ಣಯ್ಯ ಶೆಟ್ಟಿ – ಗಾಂಧಿನಗರ – ಬಿಜೆಪಿ ಬಂಡಾಯ
ಗೂಳಿಹಟ್ಟಿ ಶೇಖರ್ – ಹೊಸದುರ್ಗ – ಬಿಜೆಪಿ ಬಂಡಾಯ
ಅಖಂಡ ಶ್ರೀನಿವಾಸಮೂರ್ತಿ – ಪುಲಕೇಶಿನಗರ – ಕಾಂಗ್ರೆಸ್ ಬಂಡಾಯ
ಸೌಭಾಗ್ಯ ಬಸವರಾಜನ್ – ಚಿತ್ರದುರ್ಗ – ಕಾಂಗ್ರೆಸ್ ಬಂಡಾಯ
ವಿಜಯಾನಂದ – ಮಂಡ್ಯ – ಜೆಡಿಎಸ್ ಬಂಡಾಯ  

Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ನಿತೀಶ್