ಮೈಸೂರು ರಸ್ತೆಯ ಮೇಲುಸೇತುವೆಯ ಮೂಲಕ ಹಾದುಹೋಗಿ ಕೆ.ಆರ್ ಮಾರುಕಟ್ಟೆಯ ಹಿಂದಿನ ವಿನಾಯಕ ಚಿತ್ರಮಂದಿರ ದ ಬಳಿ ಇಳಿದು ಗೂಡ್ಸ್ ಶೆಡ್ ರೋಡ್ ಮುಖಾಂತರ ಶಾಂತಲಾ ಸಿಲ್ಕ್ ಮುಖೇನ ಮೆಜೆಸ್ಡಿಕ್ ಗೆ ಹೋಗುವ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ ಆರಂಭವಾಗಿದೆ.
10ಕೋಟಿ ರೂಪಾಯಿ ವೆಚ್ಚದಲ್ಲಿ. ಸುಮಾರು ಎರಡು ಒಂದುವರೆ ಕಿ.ಲೋ ಮೀಟರ್ ಕಾಮಗಾರಿ ನಡೆಯಲಿದೆ. ರಸ್ತೆಯ ಇಕ್ಕೆಲ್ಲಗಳಲ್ಲಿ ಒಳಚರಂಡಿ ವ್ಯವಸ್ಥೆ. ಸಿಮೆಂಟ್ ಸ್ಲಾಬ್. ಗಿಡ ನೆಡಲು ಜಾಗ. ಮಳೆ ನೀರುಸರಾಗವಾಗಿ ಹರಿದು ಹೋಗಲು ಅಧುನಿಕ ತಂತ್ರಜ್ಞಾನ ಅಳವಡಿಕೆ. ಕಾಮಗಾರಿ ನಡೆಯಲಿದ್ದು. ಮೂರು ತಿಂಗಳಲ್ಲಿ ಮುಗಿಯಲಿದೆ.
ಮೈಸೂರು ರಸ್ತೆಯಿಂದ ಬರುವ ವಾಹನಗಳು ಬಿನ್ನಿಮಿಲ್ ಮುಖಾಂತರ ಬಂದು ಬಾಳೇಮಂಡಿ ಮುಖೇನ ಮೆಜಿಸ್ಟಿಕ್ ತಲುಪಬೇಕು. ಮೊದಲ ಹಂತದ ಕಾಮಗಾರಿ ಯನಂತರ ಮತ್ತೆ ಮೇಲುಸೇತುವೆಯ ಮೂಲಕ ಇಳಿದು ಸಿ.ಸಿ.ಬಿ ಕಚೇರಿ ಮುಖಾಂತರ ಹೋಗಬೇಕು.ಇನ್ನು ಮೂರು ತಿಂಗಳು ಟ್ರಾಪಿಕ್ ಸಮಸ್ಯೆ ಉಂಟಾಗಲಿದೆ.