Webdunia - Bharat's app for daily news and videos

Install App

‘ಎಲ್ಲಿದ್ದೀಯಪ್ಪಾ ಕುಮಾರಸ್ವಾಮಿ?’

Webdunia
ಬುಧವಾರ, 10 ಆಗಸ್ಟ್ 2022 (15:38 IST)
ಸರ್ಕಾರ ಜನರ ಪರ ಸರ್ಕಾರವಾಗಿದೆ ಹೊರತು ಇದು ಯಾವುದೋ ಕಾಂಗ್ರೆಸ್, ಜೆಡಿಎಸ್​​​​ನಂತೆ ಖಾಸಗಿ ಕಂಪನಿಯಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಎಲ್ಲಿದ್ಯಪ್ಪ ಕುಮಾರಸ್ವಾಮಿ..? ಎಂದು ಲೇವಡಿ ಮಾಡಿದರು. ಅಧಿವೇಶನ ಇದ್ದಾಗಲೇ ಕುಮಾರಸ್ವಾಮಿ ಸದನಕ್ಕೆ ಬರೋದಿಲ್ಲ. ಆಮೇಲೆ ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತ ಹುಡುಕಬೇಕು. ಸದನ ಕರೆಯಿರಿ ಅನ್ನೋದು, ಆಮೇಲೆ ಬರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಬಾಯಿಗೆ ಬಂದಂತೆ ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದರು. ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ ಎಂದ ಸಚಿವರು, ನಮ್ಮ ಪಕ್ಷ ನಮ್ಮ ಸರ್ಕಾರ ಜನ ಪರವಾಗಿರುವ ಸರ್ಕಾರ. ಇದು ಯಾವುದೋ, ಕಾಂಗ್ರೆಸ್, ಜೆಡಿಎಸ್ ನಂತೆ ಪ್ರೈವೆಟ್​ ಕಂಪನಿ ತರ ಅಲ್ಲ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಅಲ್ಲಿ ಕುಟುಂಬಕ್ಕಷ್ಟೇ ಅಧಿಕಾರ. ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿ. ರಾಮನಗರದಲ್ಲಿ ಕುಮಾರಸ್ವಾಮಿದು ಒಂದು ಕಂಪನಿ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರೋ ಪಕ್ಷಗಳು ಅಂದರೆ ಇವುಗಳೇ. ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿನೇ ತೆಗೆದುಕೊಳ್ತೇವೆ. ಅಲ್ಲಿ ಎಲ್ಲ ತರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments