Webdunia - Bharat's app for daily news and videos

Install App

ಬರದ ನಾಡಿನಲ್ಲಿ ಕೈ ಬೀಸಿ ಕರೆಯುತ್ತಿರೋದು ಏನು?

Webdunia
ಭಾನುವಾರ, 1 ಸೆಪ್ಟಂಬರ್ 2019 (19:00 IST)
ಬರದ ನಾಡು, ಕೋಟೆ ನಾಡು ಅಂತೆಲ್ಲ ಕರೆಸಿಕೊಳ್ಳುವ ನಗರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಚ್ಚ ಹಸಿರಿನಿಂದ ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ?

ಚಿತ್ರದುರ್ಗ ಈಗ ವನ್ಯ ಜೀವಿಗಳ ತಾಣವಾಗಿ ಪ್ರಾಣಿ ಪ್ರಿಯರನ್ನ ತನ್ನತ್ತ ಸೆಳೆಯುತ್ತಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ದ್ವಾರ. ಒಳಗೆ ಪ್ರವೇಶ ನೀಡುತ್ತಿದ್ದಂತೆ ಕಣ್ಣಿಗೆ ಕಾಣುವ ವನ್ಯ ಮೃಗಗಳು ಮತ್ತು ಜಿಂಕೆಗಳು. ಸುತ್ತಲೂ ಹಸಿರನ್ನೇ ಹೊತ್ತುಕೊಂಡಿರುವ ಹಸಿರ ಸಿರಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕೋಟೆ ನಾಡು ಚಿತ್ರದುರ್ಗದ ಮಿನಿ ಮೃಗಾಲಯ ಆಡು ಮಲ್ಲೇಶ್ವರದಲ್ಲಿ. ಕೇವಲ ಕೋಟೆ ಕೊತ್ತಲು ಅಷ್ಟೇ ಅಲ್ಲದೆ ಚಿತ್ರದುರ್ಗದಲ್ಲಿ ಮತ್ತೊಂದಿಷ್ಟು ಸುಂದರವಾದ ಜಾಗಗಳಿವೆ.

ಈಗಾಗಲೇ ಆಡು ಮಲ್ಲೇಶ್ವರ ದಲ್ಲಿ ಹಲವಾರು ಕಾಡು ಪ್ರಾಣಿಗಳನ್ನು ವೀಕ್ಷಣೆಗೆ ಮಿನಿ ಝೂ ಮಾಡಲಾಗಿತ್ತು. ಆದ್ರೆ ಇತ್ತೀಚೆಗೆ ಪ್ರಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಆಗಮಿಸುತ್ತಿದ್ದು ಈ ಹಿನ್ನೆಲೆ ಅದನ್ನ ಮತ್ತೆ ಮರು ನಿರ್ಮಾಣದ ಜೊತೆಗೆ ಹಲವಾರು ವಿನ್ಯಾಸಗಳನ್ನು ಆಡು ಮಲ್ಲೇಶ್ವರದಲ್ಲಿ ಮಾಡಲಾಗಿದೆ. ಅದ್ರ ಉದ್ಘಾಟನೆ ಆಗಿದ್ದು ಶಾಸಕ ತಿಪ್ಪಾರೆಡ್ಡಿ ಉದ್ಘಾಟನೆ ಮಾಡಿದ್ರು.

ಕಿರು ಮೃಗಾಲಯದಲ್ಲಿ ಈಗಾಗಲೇ ಸ್ಥಳೀಯ ಪ್ರಾಣಿಗಳನ್ನು ತರಲಾಗಿದೆ. ಚಿರತೆ, ಜಿಂಕೆ, ಕೃಷ್ಣಮೃಗ ಸೇರಿದಂತೆ ಕರಡಿ, ಅಮ್ರೆಸ್ತರ್ ಪೇಸೆಂಟ್, ಕಲರ್ ಪೇಸೆಂಟ್ ಗಳನ್ನ ಮಿನಿ ಮೃಗಾಲಯಕ್ಕೆ ಆಗಮನವಾಗಿದೆ. ಒಟ್ಟು 3 ಕೋಟಿ ವೆಚ್ಚದಲ್ಲಿ ಮತ್ತೆ ಹೊಸ ವಿನ್ಯಾಸದೊಂದಿಗೆ ಮೃಗಾಲಯವನ್ನ ನವೀಕರಿಸಲಾಗಿದೆ.  



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments