ಪ್ರೀತಿಸಿ ಸಂಸಾರ ಹೂಡಿದ ಪ್ರಿಯತಮಗೆ ಕೈಕೊಟ್ಟ ಯುವಕ, ದಿಕ್ಕು ತೋಚದ ಯುವತಿ ಗತಿಯೇನು?

Webdunia
ಮಂಗಳವಾರ, 19 ಡಿಸೆಂಬರ್ 2017 (15:41 IST)
ಒಂದು ವರ್ಷದಿಂದ ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಕರೆದುಕೊಂಡು ಹೋಗಿ ಒಂದು ತಿಂಗಳ ನಂತರ ಯುವಕ ಕೈಕೊಟ್ಟಿದ್ದು, ಇದರಿಂದ ಪ್ರೀತಿಸಿ ಮೋಸಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.
 
ಶಹಾಪುರ ತಾಲೂಕಿನ ಹಾಲಗೇರಾ ಗ್ರಾಮದ ಭಾಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿ ತೀವ್ರ ಅಸ್ವಸ್ಥಳಾಗಿದ್ದ ಭಾಗ್ಯಮ್ಮಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
 
ಒಂದು ವರ್ಷ ಪ್ರೀತಿಸಿ ಒಂದು ತಿಂಗಳು ಸುತ್ತಾಡಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ 
 
ವಡಗೇರಾ ಗ್ರಾಮದ ನಾಗರಾಜು ಎಂಬಾತ ಹಾಲಗೇರೆಯ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಪಕ್ಕದ ಮನೆಯ ಭಾಗಮ್ಮಳನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಪೋಷಕರು ಪ್ರಿತಿಯ ವಿಚಾರ ತಿಳಿಯದೆ ಬೇರೆ ಹುಡುಗನ ಜೊತೆ ಮದುವೆಯ ನಿಶ್ಚಿತಾರ್ಥ ನಡೆಸಿದ್ದಾರೆ.
 
ಈ ವಿಚಾರ ತಿಳಿದ ನಾಗರಾಜು ಭಾಗಮ್ಮಳನ್ನು ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಒಂದು ತಿಂಗಳು ಸಂಸಾರ ನಡೆಸಿದ್ದಾನೆ. ನಂತರ ನನಗೆ ನೀನು ಇಷ್ಟ ಇಲ್ಲ, ಎಲ್ಲಾದರೂ ಹೋಗು ಎಂದು ಅರ್ಧದಲ್ಲಿಯೇ ಕೈ ಕೊಟ್ಟು ಪರಾರಿಯಾಗಿದ್ದಾನೆ. ಪೋಷಕರಿಗೆ ವಿಚಾರ ತಿಳಿಸಿ ಯುವತಿ ಊರಿಗೆ ಬಂದ ನಂತರ ವಡಗೇರಾ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಸಂಧಾನ ನಡೆಸಲು ಪ್ರಯತ್ನಿಸಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಧಾನಿಯ ರಸ್ತೆ ಗುಂಡಿಯನ್ನು ವಾರದೊಳಗೆ ಮುಚ್ಚಿ: ಅಧಿಕಾರಿಗಳಿಗೆ ಸಿದ್ದರಾಮಯ್ಯ ತಾಕೀತು

ಟೀಚರ್ ಎನ್ನಲೂ ನಾಲಾಯಕ್, ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ಬಾಲಕನಿಗೆ ಕಾಲಿನಿಂದ ಒದ್ದ ವಿಡಿಯೋ

ಜಪಾನ್‌ನಲ್ಲಿ ಹೊಸ ಇತಿಹಾಸ ಬರೆದ ಸನೇ ಟಕೈಚಿ, ಮೋದಿಯಿಂದ ಅಭಿನಂದನೆ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮುಂದಿನ ಸುದ್ದಿ
Show comments