ಕಾನೂನು ಉಲ್ಲಂಘನೆ ಹಿನ್ನಲೆಯಲ್ಲಿ ನಟ ಚೇತನ್ ಮೇಲೆ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಧರ್ಮ ಒಡೆಯುವಂತಹ ಹೇಳಿಕೆ, ಧರ್ಮವನ್ನು ಚೇಡಿಸಿವುದು, ಧರ್ಮಗಳ ನಡುವೆ ಕಲಹ ಸಂಘರ್ಷ ಉಂಟು ಮಾಡಿದರೆ ಈ ಸೆಕ್ಷನ್ ಅಡಿ ಕೇಸ್ ದಾಖಲಾಗುತ್ತದೆ. ಹೀಗೆ ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದನೆ ಹಾಗೂ ಹಿಂದೂ ಸಮುದಾಯದಲ್ಲಿ ವಿಷ ಬೀಜ ಬಿತ್ತುವ ಹಾಗೆ ಮಾತನಾಡಿದ್ದಾರೆ ಎನ್ನುವ ಆರೋಪದಲ್ಲಿ ಈ ಹಿಂದೆ 2 ಎಫ್ಐಆರ್ ದಾಖಲಾಗಿತ್ತು.
ಸದ್ಯ ಈ ಪ್ರಕಣರದಲ್ಲಿ ಈಗಾಗಲೇ ನಟ ಚೇತನ್ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆಗೆ ರಾಜ್ಯಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ.
ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ ಚೇತನ್ ಮೇಲೆ ಚಾರ್ಜ್ ಶೀಟ್ ದಾಖಲು ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಮತ್ತೊಂದು ಕೇಸ್ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಚೇತನ್ ಹೊರಬಂದಿದ್ದರು.
ಹೈಕೋರ್ಟ್ ನ್ಯಾಯಮೂರ್ತಿ ಸಂಬಂಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಹಿನ್ನಲೆಯಲ್ಲಿ, ಚೇತನ್ ಜೈಲು ಸೇರಿದ್ದರು. ಪ್ರಸ್ತುತ ಚಾರ್ಜ್ಶೀಟ್ ಸಲ್ಲಿಕೆಗೆ ಪೊಲೀಸರು ಪತ್ರ ಬರೆದಿರುವುದರಿಂದ ಕೆಲವೇ ದಿನದಲ್ಲಿ ಚೇತನ್ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.