Select Your Language

Notifications

webdunia
webdunia
webdunia
webdunia

ಗಣೇಶೋತ್ಸವ ಆಚರಣೆ ಬಗ್ಗೆ ಸಂಘಟನೆಗಳ ಪ್ಲ್ಯಾನ್ ಏನು?

ಗಣೇಶೋತ್ಸವ ಆಚರಣೆ ಬಗ್ಗೆ ಸಂಘಟನೆಗಳ ಪ್ಲ್ಯಾನ್ ಏನು?
ಚಾಮರಾಜಪೇಟೆ , ಶನಿವಾರ, 27 ಆಗಸ್ಟ್ 2022 (12:44 IST)
ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಇದ್ದ ಸಂಕಷ್ಟದ ಕಾರ್ಮೋಡ ಕರಗಿ ಈಗ ಅಲ್ಲಿ ಗಣಪನ ಜಾತ್ರೆಗೆ ಸಿದ್ಧತೆ ನಡೆದಿದೆ. ಮೊದಲ ಬಾರಿಯ ಐತಿಹಾಸಿಕ ಗಣೇಶೋತ್ಸವಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ.
 
ಹೈಕೋರ್ಟ್ ದ್ವಿಸದಸ್ಯ ಪೀಠ ಗಣೇಶೋತ್ಸವ ಆಚರಣೆ ನಿರ್ಧಾರವನ್ನು ಸರ್ಕಾರದ ವಿವೇಚನೆಗೆ ಬಿಟ್ಟ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಉತ್ಸವ ಆಚರಣೆಗೆ ತಯಾರಿ ನಡೆಸಿವೆ. ಚಾಮರಾಜಪೇಟೆ ನಾಗರೀಕ ಒಕ್ಕೂಟ, ಬೆಂಗಳೂರು ಉತ್ಸವ ಸಮಿತಿ ಹಾಗೂ ಹಿಂದೂ ಸಂಘಟನೆಗಳು ಹಬ್ಬದ ಉಸ್ತುವಾರಿ ವಹಿಸಲಿದೆ.

ಇಡೀ ರಾಜ್ಯದ ಗಮನ ಸೆಳೆದ ಚಾಮರಾಜಪೇಟೆಯಲ್ಲಿ ಮೂರು ದಿನ ಅದ್ಧೂರಿ ವಿಜೃಂಭಣೆಯಿಂದ ಹಬ್ಬ ಆಚರಣೆಗೆ ಸಿದ್ಧತೆ ನಡೆದಿದೆ. ಐತಿಹಾಸಿಕವಾಗಿ ಮೊದಲ ಬಾರಿ ಗಣಪನ ಪ್ರತಿಷ್ಠಾಪನೆ ಮಾಡುವುದರಿಂದ ಗಣಪನ ಪ್ರತಿಭಟನೆಗೂ ಮುನ್ನಾ ಮಹಾ ಯಜ್ಞ ನಡೆಯಲಿದೆ.

108 ಪುರೋಹಿತರ ನೇತೃತ್ವದಲ್ಲಿ ಹೋಮ ಹವನ ನಡೆಸಿ ಸ್ಥಳವನ್ನು ಶುದ್ಧೀಕರಣ ಮಾಡಲಾಗುತ್ತದೆ. ಸ್ಥಳವನ್ನು ಶುದ್ಧೀಕರಣ ಮಾಡಿದ ಬಳಿಕ ಅದ್ದೂರಿ ಪೂಜೆಗೆ ಸಿದ್ಧತೆ ನಡೆಯುತ್ತದೆ. ಮೂರು ದಿನಗಳ ಕಾಲ ಸಂಜೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬ : ಪೊಲೀಸ್ ಇಲಾಖೆಯ ನಿಯಮಗಳೇನು?