Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ ಸ್ನೇಹಮಯಿ ಮೇಲಿರುವ ಕೇಸ್‌ ಏನು

ಮುಖ್ಯಮಂತ್ರಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ ಸ್ನೇಹಮಯಿ ಮೇಲಿರುವ ಕೇಸ್‌ ಏನು

Sampriya

ಚಾಮರಾಜನಗರ , ಶುಕ್ರವಾರ, 27 ಸೆಪ್ಟಂಬರ್ 2024 (19:19 IST)
Photo Courtesy X
ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸಂಬಂಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಚಾಮರಾಜನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೂರು ವರ್ಷಗಳ ಹಿಂದೆ ವಂಚನೆ ಪ್ರಕರಣ ದಾಖಲಾಗಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾದರು.

ಪ್ರಕರಣದ ಹಿನ್ನೆಲೆ ಹೀಗಿದೆ: 2018, 2019 ಹಾಗೂ 2020ರಲ್ಲಿ ತಲಾ ಒಂದು ಲಕ್ಷದಂತೆ ಸ್ನೇಹಮಯಿ ಕೃಷ್ಣಗೆ ಮೂರು ಲಕ್ಷ ಸಾಲ ನೀಡಿದ್ದು ಪ್ರಾಮಿಸರಿ ನೋಟ್‌ ಬರೆದುಕೊಟ್ಟಿದ್ದಾರೆ. ಪಡೆದ ಸಾಲ ಹಿಂತಿರುಗಿಸದೆ ವಂಚನೆ ಎಸಗಿದ್ದಾರೆ ಎಂದು  ಪ್ರಕರಣ ದಾಖಲಾಗಿತ್ತು. ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ ಎಂದು ದೂರುನೀಡಿರುವ ಕರುಣಾಕರ ಹೇಳಿದರು.

ಮೊದಲು ಸಾಲ ಮಾಡಿ ಬಡ್ಡಿ ಸಮೇತ ಸ್ನೇಹಮಯಿ ಕೃಷ್ಣ ವಾಪಾಸ್ ನೀಡಿದ್ದರು. ನಂತರ ಸಾಲ ಪಡೆದು ಹಿಂದಿರುಗಿಸಿಲ್ಲ. ಇದೀಗ ನನ್ನ ವಿರುದ್ಧವೇ ಪರವಾನಗಿ ಇಲ್ಲದೆ ಫೈನಾನ್ಸ್‌ ಮಾಡುತ್ತಿರುವುದಾಗಿ ದೂರು ನೀಡಿದ್ದಾರೆ ಎಂದು ಕರುಣಾಕರ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಮಟ್ಟದ ಅತ್ಯುತ್ತಮ ಪ್ರವಾಸೋದ್ಯಮ ಸಾಹಸಿಕ ಪ್ರವಾಸಿ ತಾಣ ಪ್ರಶಸ್ತಿ ಗೆದ್ದ ಕುತ್ಲೂರು