Select Your Language

Notifications

webdunia
webdunia
webdunia
webdunia

ಫ್ರೆಂಡ್ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿಗೆ ಆದದ್ದದ್ರು ಏನು!?

ಫ್ರೆಂಡ್ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿಗೆ ಆದದ್ದದ್ರು ಏನು!?
ಬೆಂಗಳೂರು , ಭಾನುವಾರ, 22 ಮೇ 2022 (08:09 IST)
ಬೆಂಗಳೂರು : ಜ್ಯೂಸ್ ಕುಡಿಯಲು ಶಾಂಪಿಗ್ ಕಾಂಪ್ಲೆಕ್ಸ್ಗೆ ಬಂದಿದ್ದ ಯುವತಿ ವಾಶ್ರೂಂನಿಂದ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು,
 
ಯುವತಿಯನ್ನು ಕಾಪಾಡಲು ಹೋದ ಯುವಕನಿಗೆ ಗಂಭೀರ ಗಾಯವಾದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಲಿಯಾ(18) ಮೃತ ಯುವತಿ ಹಾಗೂ ಪೀಟರ್ (18) ಗಾಯಗೊಂಡ ಯುವಕ. ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ ಲಿಯಾ ಹಾಗೂ ಆಂಧ್ರ ಮೂಲದ ಪೀಟರ್ ಇಬ್ಬರೂ ಸೆಂಟ್ ಜಾನ್ಸ್ ಕಾಲೇಜಿನಲ್ಲಿ ಓದುತ್ತಾ ಇದ್ದರು. ಈ ಇಬ್ಬರೂ ಸ್ನೇಹಿತರು ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್ಗೆ ಬಂದಿದ್ದರು.

ಫುಡ್ ಕೋರ್ಟ್ನಲ್ಲಿ ಊಟ ಮುಗಿಸಿ ವಾಷ್ ರೂಂಗೆ ಹೋಗಿದ್ದರು. ಈ ವೇಳೆ ಲಿಯಾ ಕಾಲುಜಾರಿ ಬಿದ್ದಿದ್ದಾಳೆ. ಅವಳನ್ನು ಕಾಪಾಡಲು ಹೋದ ಪೀಟರ್ ಕೂಡ ಆಯತಪ್ಪಿ ಬಿದ್ದಿದ್ದಾನೆ.

ಘಟನೆ ವೇಳೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಅಬಕಾರಿ ದರ ಇಳಿಕೆ ?