ಪ್ರಿಯಕರನೊಂದಿಗೆ ಬೆಟ್ಟಕ್ಕೆ ತೆರಳಿದ್ದ ಮಹಿಳೆಗೆ ಏನಾಯ್ತು?

Webdunia
ಗುರುವಾರ, 11 ಆಗಸ್ಟ್ 2022 (10:37 IST)
ಕೋಲಾರ : ಅವರಿಬ್ಬರು ಸ್ನೇಹಿತರು ಆದ್ರೂ ಅವರಿಬ್ಬರಿಗೆ ಬೇರೆಯವರೊಂದಿಗೆ ಮದುವೆಯಾಗಿ ವಿಚ್ಚೇದನ ವಿವಾದ ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿತ್ತು.

ಹೀಗಿರುವಾಗ ಆ ಇಬ್ಬರು ಸ್ನೇಹಿತರು ಕದ್ದುಮುಚ್ಚಿ ಸೇರ್ತಾ ಇದ್ರು. ಆದರೆ ಅಲ್ಲೇನಾಗಿದೆ ಗೊತ್ತಾಗಿಲ್ಲ, ಕೊಲೆಯಂತೆ ಅನುಮಾನ ಹುಟ್ಟಿಸುವ ಅಪಘಾತವೊಂದು ನಡೆದು ಆಕೆ ಸಾವನ್ನಪ್ಪಿದ್ದಾಳೆ.

ಕುತ್ತಿಗೆ ಭಾಗದಲ್ಲಿ ಗಾಯವಾಗಿ ಮೃತಪಟ್ಟ ಮಹಿಳೆ ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯ ತಸ್ಮಿಯಾ ಬಾನು. 

ಹೌದು ನಿನ್ನೆ ತಸ್ಮಿಯಾ ಹಾಗೂ ಆಕೆ ಸ್ನೇಹಿತ ಮುಜ್ಜು ಅಂತರಗಂಗೆ ಬೆಟ್ಟಕ್ಕೆ ಬಂದಿದ್ದರು. ಸುಂದರ ವಾತಾವರಣದಲ್ಲಿ ಕೆಲ ಹೊತ್ತು ಕಾಲ ಕಳೆದ ನಂತರ ಇಬ್ಬರು ವಾಪಸ್ಸಾಗುವ ವೇಳೆ ಅಲ್ಲಿ ನಡೆಯಬಾರದೊಂದು ಘಟನೆ ನಡೆದು ಹೋಗಿತ್ತು. ಮುಜ್ಜು ಜೊತೆಗೆ ಹೋಗಿದ್ದ ತಸ್ಮಿಯಾಬಾನು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ.

ಇಬ್ಬರೂ ಅಂತಗಂಗೆ ಬೆಟ್ಟಕ್ಕೆ ಇನ್ನೋವಾ ಕಾರ್ನಲ್ಲಿ ಹೋಗಿ ವಾಪಸ್ ಬರುವಾಗ ಯಾರಾದರೂ ನೋಡಿದ್ರೆ ಅಂತ ತಸ್ಮಿಯಾಬಾನು ಕಾರ್ನ ಹಿಂಬದಿ ಸೀಟ್ನಲ್ಲಿ ಮಲಗಿದ್ದಳಂತೆ.

ಈ ವೇಳೆ ಮುಜ್ಜು ಕಾರ್ ಚಲಾಯಿಸುತ್ತಿದ್ದ ಆಗ ಅಂತರಗಂಗೆ ರಸ್ತೆಯ ಕೀಲುಕೋಟೆ ತಿರುವಿನಲ್ಲಿ ರೋಡ್ ಹಂಪ್ ಇದ್ದ ಕಾರಣಕ್ಕೆ ಸಡನ್ ಆಗಿ ಬ್ರೇಕ್ ಹೊಡೆದಿದ್ದಾನೆ. ಆಗ ಹಿಂದೆ ಸೀಟ್ನಲ್ಲಿ ಮಲಗಿದ್ದ ತಸ್ಮಿಯಾಬಾನು ಒಂದೆ ಬಾರಿ ಮುಂದೆ ಬಿದ್ದಿದಾಳೆ ಅದೇ ಹೊತ್ತಿಗೆ ಮದ್ಯದ ಪೋಲ್ಡಿಂಗ್ ಸೀಟ್ ಮುಂದಕ್ಕೆ ಹೋಗಿ ಹಿಂದಕ್ಕೆ ಬಂದು ಸೀಟ್ ಕೆಳಗಿದ್ದ ಹರಿತವಾದ ಮೊಳೆ ಅವಳ ಕುತ್ತಿಗೆ ಭಾಗಕ್ಕೆ ಚುಚ್ಚಿದೆ.

ಇದರಿಂದ ಉಸಿರಾಟದ ಸಮಸ್ಯೆಯಾಗಿದೆ ತಕ್ಷಣ ಅದೇ ಕಾರ್ನಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಸ್ಮಿಯಾಬಾನು ಸಾವನ್ನಪ್ಪಿದ್ದಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸಹಾಯಕರಾದ ಮಲ್ಲಿಕಾರ್ಜುನ ಖರ್ಗೆ: ಇನ್ನು ರಾಹುಲ್ ಗಾಂಧಿಯೇ ಬರಬೇಕು

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ಮುಂದಿನ ಸುದ್ದಿ
Show comments