Publish Date: Sat, 29 Aug 2020 (22:45 IST)
Updated Date: Sat, 29 Aug 2020 (22:47 IST)
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದೆ.
ಈ ನಡುವೆ ಮಾಜಿ ಶಾಸಕ ಮುನಿರತ್ನ ಅವರಿಗೆ ಕೊರೊನಾ ವೈರಸ್ ತಗುಲಿರೋದು ದೃಢಪಟ್ಟಿದೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಮತಕ್ಷೇತ್ರದ ಮಾಜಿ ಶಾಸಕರಾಗಿರುವ ಮುನಿರತ್ನ ತಮಗೆ ಕೊರೊನಾ ಇರುವುದನ್ನು ಅವರೇ ಬಹಿರಂಗಪಡಿಸಿದ್ದಾರೆ.
ಮಾಜಿ ಶಾಸಕರು ಶೀಘ್ರ ಗುಣಮುಖರಾಗಲೆಂದು ಪಕ್ಷದ ಕಾರ್ಯಕರ್ತರು ಹಾರೈಸಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.