Select Your Language

Notifications

webdunia
webdunia
webdunia
Friday, 11 April 2025
webdunia

ಸಚಿವ ಸ್ಥಾನದ ಆಕಾಂಕ್ಷಿ ಬಿ.ಸಿ ಪಾಟೀಲ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

ಹಾವೇರಿ
ಹಾವೇರಿ , ಶುಕ್ರವಾರ, 23 ನವೆಂಬರ್ 2018 (06:46 IST)
ಹಾವೇರಿ : ಸಚಿವ ಸ್ಥಾನದ ಆಕಾಂಕ್ಷಿಯಾದ ಶಾಸಕ ಬಿಸಿ ಪಾಟೀಲ್ ಅವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಗೆ ವೇಳೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಭರವಸೆ ನೀಡಿದ್ದಾರೆ.


ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಶಾಸಕ ಬಿಸಿ ಪಾಟೀಲ್ ನನಗಿಂತ ಹಿರಿಯರು. ನಾನು ಅವರನ್ನು ಮಂತ್ರಿ ಮಾಡಬೇಕೆಂದು ಮುಖಂಡರಿಗೆ ತಿಳಿಸಿದ್ದೇನೆ. ಖಂಡಿತ ಅವರು ಈ ಬಾರಿ ಸಚಿವರಾಗುತ್ತಾರೆ. ಮುಂದಿನ ಡಿಸೆಂಬರ್ 3ರ ಒಳಗೆ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.


ಇದೇ ವೇಳೆ ಮಾತನಾಡಿದ ಶಾಸಕ ಬಿಸಿ ಪಾಟೀಲ್, ನಾನು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು, ಯಾವುದಕ್ಕೂ ಈಗಲೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಳೆದ 4, 5 ತಿಂಗಳಿನಿಂದ ಸಚಿವ ಸ್ಥಾನ ಬಗ್ಗೆ ಕಾಯುತ್ತಿದ್ದೇನೆ. ಇನ್ನು ಹತ್ತು ದಿನ ಕಾಯುವುದರಲ್ಲಿ ಏನು ಆಗುವುದಿಲ್ಲ. ಇಲ್ಲವಾದರೆ ಶಾಸಕನಾಗಿಯೇ ಇರುತ್ತೇನೆ. ಸಚಿವನಾದರೆ ತಾಲೂಕಿನ, ಜಿಲ್ಲೆಯ ಸೇವೆ ಮಾಡಲು ಸಹಕಾರ ಆಗಲಿದೆ.


ಶೀಘ್ರವೇ ಸಂಪುಟ ರಚನೆ ಮಾಡುವುದಾಗಿ ಹೇಳಿದ್ದಾರೆ. ಈ ಬಾರಿ ಆಗದಿದ್ದರೆ ಇನ್ನೊಂದು ದಿನಾಂಕ ಕೊಡಬಹುದು. ನಾನು ಆಶಾವಾದಿಯಾಗಿದ್ದು, ತಾಳಿದವನು ಬಾಳಿಯಾನು ಎಂಬಂತೆ ನಾನು ಶಾಸನಾಗಿಯೇ ಇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಳೆತ ತರಕಾರಿ, ಹುಳ ಹತ್ತಿದ ಬೆಳೆಕಾಳು ಇದು ಹಾಸ್ಟೆಲ್ ಊಟದ ಹಾಡುಪಾಡು!