ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಸ್ಪೀಕರ್ ಹೇಳಿದ್ದೇನು?

ಬುಧವಾರ, 17 ಜುಲೈ 2019 (12:17 IST)
ಸುಪ್ರೀಂ ಕೋರ್ಟ್ ನೀಡಿರೋ ತೀರ್ಪನ್ನು ಸ್ವಾಗತಿಸೋದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿರುವ ಅವರು, ಗುರುವಾರ ವಿಧಾನಸಭೆಯಲ್ಲಿ ಮೈತ್ರಿ ಸರಕಾರದಿಂದ ವಿಶ್ವಾಸ ಮತ ನಡೆಯಲಿದೆ.

ಸದನಕ್ಕೆ ಬರೋದು ಬಿಡೋದು ರಾಜೀನಾಮೆ ನೀಡಿರೋ ಶಾಸಕರಿಗೆ ಬಿಟ್ಟ ವಿಚಾರವಾಗಿದೆ. ಕೋರ್ಟ್ ತೀರ್ಪನಿಂದ ಯಾರೂ ಗೆದ್ದಿಲ್ಲ, ಯಾರೂ ಸೋತಿಲ್ಲ. ಸ್ಪೀಕರ್ ಸ್ಥಾನದ ಗೌರವವನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದರು.

ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುವೆ ಅಂತಂದ ಸ್ಪೀಕರ್, ಸಮಯಕ್ಕೆ ತಕ್ಕಂತೆ ಬಾಕಿ ಇರೋ ಕೆಲಸಗಳನ್ನು ಮಾಡೋದಾಗಿ ಹೇಳಿದ್ರು.

ಈ ಹಿಂದೆ ಸಂಸದ ಉಮೇಶ್ ಜಾಧವ್ ಅವರ ಪ್ರಕರಣ ಸಂದರ್ಭದಲ್ಲಿ ಅನುಸರಿಸಿದ ಕ್ರಮಗಳನ್ನೇ ಈಗಲೂ ಪಾಲಿಸೋದಾಗಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅತೃಪ್ತ ಶಾಸಕರಿಗೆ ಅನರ್ಹತೆ ಭಯ: ಸುಪ್ರೀಂ ತೀರ್ಪಿನ ಬಳಿಕ ಡಿಕೆಶಿ ಹೊಸ ಬಾಂಬ್