Publish Date: Sun, 19 Jul 2020 (10:01 IST)
Updated Date: Sun, 19 Jul 2020 (10:09 IST)
ಕೋಲಾರ : ಕೊರೊನಾ ಭಯಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಗಾಂಧಿನಗರದಲ್ಲಿ ನಡೆದಿದೆ.
ನಾಗರಾಜ್ (37) ಮನೆಯಲ್ಲಿ ನೇಣಿಗೆ ಶರಣಾದ ವ್ಯಕ್ತಿ. ತಮ್ಮನಿಗೆ ನಿನ್ನೆ ಸೋಂಕು ಇರುವುದು ದೃಢಪಟ್ಟಿತ್ತು. ಅಣ್ಣನಿಗೆ ವಿಚಾರ ತಿಳಿದು ಭಯದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.