Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಸಾಧ್ಯತೆ; ಗಣೇಶ, ಮೊಹರಂ ಹಬ್ಬಗಳಿಗೆ ನಿರ್ಬಂಧ

ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಸಾಧ್ಯತೆ; ಗಣೇಶ, ಮೊಹರಂ ಹಬ್ಬಗಳಿಗೆ ನಿರ್ಬಂಧ
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (09:39 IST)
ಬೆಂಗಳೂರು, ಆ. 13: ಕೇರಳದಲ್ಲಿ ಕೋವಿಡ್ ಕೇಸ್ಗಳು ವಿಪರೀತ ಏರುತ್ತಿವೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಕೊರೋನಾ ಮತ್ತೆ ಕೇಕೆ ಹಾಕಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಆತಂಕಕಾರಿ ಎನಿಸುವಷ್ಟರ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಕೇಸ್ಗಳು ದಾಖಲಾಗುವ ನಿರೀಕ್ಷೆ ಇದೆ.

ಈಗಾಗಲೇ ಡೆಲ್ಟಾ ಪ್ಲಸ್ ಎಂಬ ಕೋವಿಡ್ ರೂಪಾಂತರಿ ವೈರಸ್ನ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇವೆ ಎರಡನೇ ಕೋವಿಡ್ ಅಲೆಯ ವೇಳೆ ನಿಯಂತ್ರಣಕ್ಕೆ ಬಾರದೇಹೋಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸದಿರಲು ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳಿಗೆ ಯೋಜಿಸಿದೆ. ನೂರಾರು ಮಕ್ಕಳು ಕಳೆದ ಕೆಲ ದಿನಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಬೆಡ್ಗಳನ್ನ ಮಕ್ಕಳಿಗಾಗಿ ಈಗಾಗಲೇ ಸಜ್ಜುಗೊಳಿಸಲಾಗಿದೆ. ಇದರ ಜೊತೆ ವೀಕೆಂಡ್ ಕರ್ಫ್ಯೂ ಹೇರುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ. ಹಾಗೆಯೇ, ಮುಂಬರುವ ಹಬ್ಬಗಳಿಗೆ ಸರಕಾರ ಈಗಾಗಲೇ ಕೆಲ ನಿರ್ಬಂಧಗಳನ್ನ ವಿಧಿಸಿದೆ.
ವೀಕೆಂಡ್ ಕರ್ಫ್ಯೂ: ಭಾನುವಾರ ಸ್ವಾತಂತ್ರ್ಯೋತ್ಸವದ ಬಳಿಕ ವೀಕೆಂಡ್ ಕರ್ಫ್ಯೂ ಹೇರಲು ಸರ್ಕಾರ ಯೋಜಿಸಿದೆ. ಅಂದರೆ, ಆ. 21 ಮತ್ತು 22ರಂದು ಬೆಂಗಳೂರಿನಲ್ಲಿ ವಾರಾಂತ್ಯದ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿರಿಸಲು ನಿರ್ಧರಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಸರ್ಕಾರದ ಮೂಲಗಳು. ವೀಕೆಂಡ್ ಕರ್ಫ್ಯೂನಿಂದಲೂ ನಿರೀಕ್ಷಿತ ಪರಿಣಾಮ ಸಿಗಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಹೇರುವ ಸಾಧ್ಯತೆ ಇದೆ.
ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ:
ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸುವದನ್ನು ನಿಷೇಧಿಸಲಾಗಿದೆ. ಗನೇಶೋತ್ಸವ ಅಷ್ಟೇ ಅಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿ, ದುರ್ಗಾಪೂಜೆಯನ್ನು ಸಾರ್ವಜನಿಕವಾಗಿ ಆಚರಿಸಬಾರದು ಎಂದು ಸರ್ಕಾರ ಆದೇಶಿಸಿದೆ. ಮನೆಗಳಲ್ಲೇ ಕುಟುಂಬಸದಸ್ಯರು ಮಾತ್ರ ಸರಳವಾಗಿ ಹಬ್ಬವನ್ನ ಆಚರಿಸಲು ಅನುಮತಿ ಇದೆ. ಗಣಪತಿ ವಿಸರ್ಜನೆ ಕೂಡ ಮನೆಯಲ್ಲೇ ಆಗಬೇಕು. ಇನ್ನು, ಮುಸ್ಲಿಮರ ಮೊಹರಂ ಹಬ್ಬಕ್ಕೂ ಹಲವು ನಿರ್ಬಂಧಗಳನ್ನ ಹಾಕಲಾಗಿದೆ.
ಗಣೇಶ ಹಬ್ಬಕ್ಕೆ ಇರುವ ನಿರ್ಬಂಧಗಳು:
* ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸುವಂತಿಲ್ಲ.
* ಯಾವುದೇ ಮೆರವಣಿಗೆ, ಮನರಂಜನೆ ಕಾರ್ಯಕ್ರಮ ಆಯೋಜಿಸುವಂತಿಲ್ಲ
* ಮನೆಯಲ್ಲೇ ಗಣೇಶ ಮೂರ್ತಿ ಕೂರಿಸಬೇಕು. ಮನೆಯಲ್ಲೇ ವಿಸರ್ಜಿಸಬೇಕು. ಅಥವಾ ಬಿಬಿಎಂಪಿ ಸ್ಥಳೀಯವಾಗಿ ನಿಗದಿಪಡಿಸಿದ ನೀರಿನ ಹೊಂಡದಲ್ಲಿ ಗಣೇಶನ ವಿಸರ್ಜನೆ ಮಾಡಬಹುದು
* ಗಣೇಶ ಹಬ್ಬದ ವೇಳೆ ದೇವಸ್ಥಾನಗಳಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲನೆ ಕಡ್ಡಾಯ
ಮೊಹರಂ ಹಬ್ಬಕ್ಕೆ ಇರುವ ನಿರ್ಬಂಧಗಳು:
* ಪಂಜಾ, ಆಲಂ ಮತ್ತು ತಾಜಿಯತ್ಗಳನ್ನ ಸಾರ್ವಜನಿಕರು ದೂರದಿಂದಲೇ ದರ್ಶಿಸಬೇಕು. ಮುಟ್ಟುವಂತಿಲ್ಲ.
* ಸಾರ್ವಜನಿಕವಾಗಿ ಮೊಹರಂ ಆಚರಣೆ ಇಲ್ಲ. ಸಭೆ ಸಮಾರಂಭಗಳನ್ನ ನಡೆಸುವಂತಿಲ್ಲ
* ಪ್ರಾರ್ಥನಾ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಹಾಕುವುದು ಕಡ್ಡಾಯ
* 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕೆಳಗಿನವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು.
* ಮಸೀದಿಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ. ಪ್ರಾರ್ಥನೆಗೆ ಬರುವವರು ಮನೆಗಳಿಂದ ಮುಸಲ್ಲಾವನ್ನು ತರಬೇಕು. ಇತರರನ್ನ ಸ್ಪರ್ಶಿಸಲು ಹೋಗಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ಸೀಡಿ ಕೇಸ್ ಮರುತನಿಖೆ ಅಗತ್ಯವಿಲ್ಲ: ಎಸ್ಐಟಿ ಮುಖ್ಯಸ್ಥ