Webdunia - Bharat's app for daily news and videos

Install App

ಜ.26ರ ಹವಾಮಾನ; ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಚಳಿ, ಶೀತಗಾಳಿ

Webdunia
ಬುಧವಾರ, 26 ಜನವರಿ 2022 (20:32 IST)
ರಾಜ್ಯದಲ್ಲಿ ಜನವರಿ ತಿಂಗಳಾರಂಭದಲ್ಲಿ ಕಡಿಮೆಯಾಗಿದ್ದ ಚಳಿ ಇನ್ನೇನು ಕಡಿಮೆ ಆಯ್ತು ಅಂದುಕೊಳ್ಳುವಷ್ಟರಲ್ಲಿ ತಿಂಗಳಾಂತ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣಕ್ಕೆ ಜನರು ಮನೆಯಿಂದ ಹೊರಬರದಂತಾಗಿದೆ.
ರಾಜ್ಯದಲ್ಲಿ ಬದಲಾಗುತ್ತಿರುವ ಹವಾಮಾನಕ್ಕೆ ಪ್ರತಿ ಮನೆಗಳಲ್ಲೂ ಶೀತ ಸಂಬಂಧಿತ ಕಾಯಿಲೆಗಳಾದ ನೆಗಡಿ, ಜ್ವರ, ಕೆಮ್ಮು, ದಮ್ಮು ಕಾಣಿಸಿಕೊಳ್ಳಲಾರಂಭಿಸಿವೆ. ಬೆಳಗ್ಗೆ ಮೈನಡುಗುವ ಚಳಿಗೆ ಜನರು ಹೈರಾಣಾಗಿದ್ದರೆ, ಸಂಜೆ ಆಗುತ್ತಿದ್ದಂತೆ ಬೀಸುವ ಶೀತ ಗಾಳಿಗೆ ಜನರು ಬೆಚ್ಚಗೆ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆ ಕಾಲದ ಅನುಭವವನ್ನು ನೀಡುತ್ತಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗಗಳಲ್ಲಿ ಚಳಿಯ ಪ್ರಮಾಣ 15 ರಿಂದ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 32 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುತ್ತಿದೆ. ಕೆಲ ಭಾಗಗಳಲ್ಲಿ ಬೆಳಗಿನ ಜಾವ ಮಂಜು ಸಹ ಬೀಳುತ್ತಿದೆ, ಇಬ್ಬನಿ ಸಹಿತ ಚಳಿ ಇರುವುದರಿಂದ ಜನ ಬೆಂಕಿ ಕಾಯಿಸಿಕೊಳ್ಳುವ ಮೊರೆ ಹೋಗಿದ್ದಾರೆ.
2021ರಲ್ಲಿ ಹೆಚ್ಚು ಅಕಾಲಿಕ ಮಳೆಯನ್ನು ಕಂಡಿದ್ದು, ಈ ವಾತಾವರಣದ ಏರಿಳಿತಕ್ಕೆ ಕಾರಣವಾಗಿದೆ. ಸದ್ಯ ಅಕಾಲಿಕ ಮಳೆ ನಿಂತಿದ್ದು, ರಾಜ್ಯದ ಜಲಾಶಯಗಳು ಇಂದಿಗೂ ಭಾಗಶಃ ಭರ್ತಿಯಾಗಿವೆ. ಅಕಾಲಿಕ ಮಳೆ ರೈತರ ಬೆಳೆಯನ್ನು ನಾಶಗೊಳಿಸಿದ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿತ್ತು. ಈ ಫೆಬ್ರವರಿ ಅಂತ್ಯದವರೆಗೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
 
ಜಿಲ್ಲಾವಾರು ಹವಾಮಾನ ವರದಿ.
ಬೆಂಗಳೂರು 27-18, ಮೈಸೂರು 29-18, ಚಾಮರಾಜನಗರ 29-19, ರಾಮನಗರ 29-19, ಮಂಡ್ಯ 30-19, ಬೆಂಗಳೂರು ಗ್ರಾಮಾಂತರ 27-18, ಚಿಕ್ಕಬಳ್ಳಾಪುರ 28-18, ಕೋಲಾರ 28-18, ಹಾಸನ 28-17, ಚಿಕ್ಕಮಗಳೂರು 28-15, ದಾವಣಗೆರೆ 31-18, ಶಿವಮೊಗ್ಗ 32-17, ಕೊಡಗು 27-14, ತುಮಕೂರು 29-18, ಉಡುಪಿ 30-22, ಮಂಗಳೂರು 30-22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉತ್ತರ ಕನ್ನಡ 31-16, ಧಾರವಾಡ 29-16, ಹಾವೇರಿ 31-17, ಹುಬ್ಬಳ್ಳಿ 31-17, ಬೆಳಗಾವಿ 29-15, ಗದಗ 30-17, ಕೊಪ್ಪಳ 30-19, ವಿಜಯಪುರ 30-18, ಬಾಗಲಕೋಟ 31-18, ಕಲಬುರಗಿ 30-18, ಬೀದರ್ 27-14, ಯಾದಗಿರಿ 30-18, ರಾಯಚೂರ 30-19 ಮತ್ತು ಬಳ್ಳಾರಿ 30-20 ಡಿಗ್ರಿ ಸೆಲ್ಸಿಯಸ್ ಇರಲಿದೆ.
 
ಉತ್ತರ ಭಾರತದಲ್ಲಿ ಶೀತಗಾಳಿ, ಹಿಮಪಾತ.
ಮುಂದಿನ ಕೆಲವು ದಿನಗಳವರೆಗೆ ದೆಹಲಿ, ಪಂಜಾಬ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಶೀತ ಅಲೆ ಬೀಸಲಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆ ಮತ್ತು ಹಿಮಪಾತದ ಮುನ್ಸೂಚನೆ ಇದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಲಘು ತೀವ್ರತೆಯ ಮಳೆಯ ಮುನ್ಸೂಚನೆ ನೀಡಲಾಗಿದೆ.
ಗುಜರಾತ್‌ನಲ್ಲಿ ಕನಿಷ್ಠ ತಾಪಮಾನ 5-7 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದ ಮೇಲೆ 3-5 ಡಿಗ್ರಿ ಸೆಲ್ಸಿಯಸ್ ಮತ್ತು ಉತ್ತರ ಪ್ರದೇಶ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ 1-2 ಡಿಗ್ರ ಸೆಲ್ಸಿಯಸ್ ಇರಲಿದೆ.
 
ಉತ್ತರಪ್ರದೇಶದಲ್ಲಿ ದಟ್ಟವಾದ ಮಂಜಿನ ವಾತಾವರಣ.
ಉತ್ತರಪ್ರದೇಶದ ಕಾನ್ಪುರದಲ್ಲಿ ಇಂದು ಕೂಡ ಶೀತಯುತ ಗಾಳಿ ಕಾಣಿಸಿಕೊಂಡಿದೆ. ಹೀಗಾಗಿ ಜನರು ಬೆಂಕಿಯ ಮುಂದೆ ಕುಳಿತು ತಮ್ಮನ್ನು ತಾವು ಬೆಚ್ಚಗಿಡುವ ಪ್ರಯತ್ನದಲ್ಲಿ ನಿರತರಾಗಿದ್ದರು. ಪೂರ್ವ ಉತ್ತರಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ದಟ್ಟವಾದ ಮಂಜು ವಾತಾವರಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಭಾನುವಾರ ಹಿಮಪಾತವಾಗಿದ್ದು, ಹೀಗಾಗಿ ಕನಿಷ್ಠ 13 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಆದ್ದರಿಂದ ಇಂದು ದೆಹಲಿಗೆ ತಡವಾಗಿ ರೈಲುಗಳು ಆಗಮಿಸುವ ಸಾಧ್ಯತೆ ಇದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments