Webdunia - Bharat's app for daily news and videos

Install App

ಅಕ್ಕಿ ಕೊಡುವುದಂತೂ ನಿಶ್ಚಿತ ಯಾವಾಗ ಕೊಡುವುದು ಎಂದು ಸೋಮವಾರ ಹೇಳ್ತೇವೆ- ಸಿಎಂ

Webdunia
ಶನಿವಾರ, 17 ಜೂನ್ 2023 (20:17 IST)
ಹೊರರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರವಾಗಿ ತೆಲಂಗಾಣದಲ್ಲಿ ನಾನೇ ಅಲ್ಲಿನ ಸಿಎಂ ಜತೆ ಮಾತಾಡಿದೀನಿ.ಅಲ್ಲಿ ಅಕ್ಕಿ ಸಿಕ್ತಾ ಇಲ್ವಂತೆ.ನಮ್ಮ ಸಿಎಸ್ ಅವರಿಗೂ ಮಾತಾಡೋಕ್ಕೆ ಹೇಳಿದೀನಿ.ಛತ್ತೀಸ್ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋದಾಗಿ ಹೇಳಿದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಛತ್ತೀಸ್ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿ.ಸಾಗಣೆ ವೆಚ್ಚವೂ ಜಾಸ್ತಿ.ಇವತ್ತು ಸಂಜೆ ಸಭೆ ಮಾಡ್ತೇವೆ. ನಂತರ ಹೇಳ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಆಂಧ್ರದ ಜತೆ ನಮ್ಮ ಸಿಎಸ್ ಅವರನ್ನು ಮಾತಾಡೋಕೆ ಹೇಳಿದೀನಿ‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.
 
ಇನ್ನೂ ಕಮೀಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡ್ತಿದಾರೆ ಎಂಬ ವಿಜಯೇಂದ್ರ ಆರೋಪ ವಿಚಾರಕ್ಕೆ ವಿಜಯೇಂದ್ರಗೆ ಸಿಎಂ ತಿರುಗೇಟು ನೀಡಿದ್ದಾರೆ.ಇಲ್ಲಿ ಅಕ್ಕಿ ಕೊಡಿಸಲಿ ವಿಜಯೇಂದ್ರ.ಮಿಲ್ ನಲ್ಲಿ ಇದೆಯಾ ಅಷ್ಟು ಅಕ್ಕಿ?ಸುಮ್ನೆ ಮಾತಾಡ್ತಾರೆ ಅಂತ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
 
ಇನ್ನೂ ಅಕ್ಕಿ ಕೊಡುವುದಂತೂ ನಿಶ್ಚಿತ.ಯಾವತ್ತಿಂದ ಕೊಡೋದಕ್ಕೆ ಅನುಕೂಲ ಅಂತ ತೀರ್ಮಾನ ಮಾಡಬೇಕಾಗುತ್ತೆ.ಅಲ್ಲಿಂದ ಸಾಗಾಣೆಗೆ ತಡವಾಗಬಹು.ಇಲ್ಲಿ ಸ್ಟಾಕ್ ಇತ್ತು ಅಂತ ನಾವು ದಿನಾಂಕ ಘೋಷಣೆ ಮಾಡಿದ್ವಿ.ನಾವು ಬೇರೆ ವ್ಯವಸ್ಥೆ ಮಾಡ್ತೀವಿ.ಪಾಸಿಟಿವ್ ರೆಸ್ಪನಾನ್ಸ್ ಸಿಕ್ಕಿದೆ.ಸೋಮವಾರದಂದು ಯಾವಾಗ ಕೊಡ್ತೀವಿ ಅನ್ನೋದನ್ನ ಹೇಳ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments