Select Your Language

Notifications

webdunia
webdunia
webdunia
webdunia

ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು: ಬಿಎಸ್‌ವೈ

ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು: ಬಿಎಸ್‌ವೈ
ಮೈಸೂರು , ಭಾನುವಾರ, 7 ಮೇ 2017 (17:23 IST)
ನಮಗೆ ನಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಇದರಿಂದ ನಾನು ಹೊರತಾಗಿಲ್ಲ. ಎಲ್ಲರು ಸೇರಿ ಸಂಘಟನೆ ಉಳಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
 
ಸಂಘಟನೆ ಬೆಳೆಸುವತ್ತ ಹೆಚ್ಚಿನ ಗಮನ ಹರಿಸಬೇಕು. ನಮ್ಮ ದಾರಿ ಮತ್ತು ಗುರಿ ಸ್ಪಷ್ಟವಾಗಿರಬೇಕು. ಅಂದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  
 
ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಬರಗಾಲದ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುತ್ತೇನೆ. ಮೈಸೂರಿನಿಂದ ತೆರಳುವ ಮುನ್ನ ಸಂಘಟನೆ ಬೆಳೆಸುವ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದರು. ಮೈಸೂರಿನಲ್ಲಿ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿಗೆ ತೆರೆ ಬಿದ್ದಿದ್ದು, ಮುಂದಿನ ಕಾರ್ಯಕಾರಿಣಿಯನ್ನು ಜುಲೈ 22 ಮತ್ತು 23 ರಂದು ಬಳ್ಳಾರಿಯಲ್ಲಿ ಆಯೋಜಿಸಲಾಗುವುದು ಎಂದರು
 
ರಾಜ್ಯದ ಜನತೆ ನಮ್ಮ ಪರವಾಗಿದ್ದಾರೆ. ಅದರ ಅವಕಾಶ ಪಡೆಯಲು ಎಲ್ಲರೂ ಒಂದಾಗಿ ಹೋಗಬೇಕು. ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪರೋಕ್ಷವಾಗಿ ವಿಷಾದ ವ್ಯಕ್ತಪಡಿಸಿದರು. 
 
ವರಿಷ್ಠರ ಸೂಚನೆ ಮೇರೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದ ಯಡಿಯೂರಪ್ಪ, ಮಾಧ್ಯಮಗಳ ಕ್ಷಮೆಯಾಚಿಸಿ ನಿರ್ಗಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋಗಿ ಬಂದವರು ಬಿಜೆಪಿಯಲ್ಲಿಯೇ ಇದ್ದಾರೆ: ಸಿಎಂ ವಾಗ್ದಾಳಿ