Select Your Language

Notifications

webdunia
webdunia
webdunia
webdunia

ಭ್ರಷ್ಟರು ಭ್ರಷ್ಠರೇ ಯಾರಿಗೂ ಆಪ್ತರಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ

ಭ್ರಷ್ಟರು ಭ್ರಷ್ಠರೇ ಯಾರಿಗೂ ಆಪ್ತರಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಬೆಂಗಳೂರು , ಶುಕ್ರವಾರ, 2 ಡಿಸೆಂಬರ್ 2016 (12:31 IST)
ಭ್ರಷ್ಟರು ಭ್ರಷ್ಠರೇ ಯಾರಿಗೂ ಆಪ್ತರಾಗಿರಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಐಟಿ ದಾಳಿಯಲ್ಲಿ ಸಿಕ್ಕಿ ಬಿದ್ದ ಅಧಿಕಾರಿಗಳು ನನಗೆ ಆಪ್ತರೆಂದು ನಿಮಗೆ ಹೇಳಿದವರಾರು? ಇಲ್ಲಸಲ್ಲದ್ದನ್ನು ನೀವು ಸೃಷ್ಟಿಸಿದಲ್ಲಿ ಏನು ಮಾಡೋಕಾಗುತ್ತೆ? ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದರು.
 
ಯಾವುದೇ ಅಧಿಕಾರಿ ತಪ್ಪು ಮಾಡಿದರೂ ಅವರ ವಿರುದ್ಧ ಸರಕಾರ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಅವರು ನಮಗೆ ಆಪ್ತ ಬೇರೆಯವರಿಗೆ ಆಪ್ತರು ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಹಿನ್ನೆಲೆ: ಬೆಂಗಳೂರಿನ ಸಂಜಯ ನಗರದಲ್ಲಿರುವ ಸಚಿವ ಎಚ್.ಸಿ.ಮಹಾದೇವಪ್ಪ ಆಪ್ತ ಅಧಿಕಾರಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 2000 ರೂ ನೋಟುಗಳ ಕೋಟಿ ಕೋಟಿ ಮೌಲ್ಯದ ಹಣ ಪತ್ತೆಯಾಗಿತ್ತು.
 
ಪೆಬಲ್‌ಬಾಯ್ ಅಪಾರ್ಟ್‌ಮೆಂಟ್‌ 5ನೇ ಟವರ್‌ನ 183ನೇ ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಚೀಫ್ ಪ್ರೊಜೆಕ್ಟ್ ಆಫೀಸರ್ ಎಸ್.ಸಿ.ಜಯಚಂದ್ರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 2000 ಮುಖಬೆಲೆಯ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ದಿಗ್ಭ್ರಮೆ ಮೂಡಿಸಿದೆ. 
 
ಪುತ್ರ ತ್ರಿಜೇಶ್ ಹೆಸರಲ್ಲಿ ತಲಾ 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಮತ್ತು ಪೋಸೆ ಇಂಪೋರ್ಟೆಡ್ ಕಾರುಗಳು, ಒಂದು ಬೈಕ್  ನಗದು ಹಣ ಪಾವತಿಸಿ ಖರೀದಿ ಮಾಡಿರುವುದು ಕೂಡಾ ಬೆಳಕಿಗೆ ಬಂದಿದೆ. ನಿನ್ನೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಇನ್ನು ಮುಕ್ತಾಯವಾಗಿಲ್ಲ ಎನ್ನಲಾಗಿದೆ.
 
ಲೋಕೋಪೋಯೋಗಿ ಇಲಾಖೆಯ ಸ್ಟೇಟ್ ಹೈ-ವೇ ವಿಭಾಗದಲ್ಲಿ ಚೀಫ್ ಪ್ರೊಜೆಕ್ಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಯಚಂದ್ರ ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ಕಿನ ಸೇತುವೆ ತಡೆಯಾಜ್ಞೆ ತೆರವು ಬಳಿಕ ಆರಂಭ : ಸಚಿವ ಕೆ.ಜೆ. ಜಾರ್ಜ್