ಬೆಂಗಳೂರು : 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನಲೆಯಲ್ಲಿ ನಾವು 15 ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರು ದಯನೀಯವಾಗಿ ಸೋಲುತ್ತಾರೆ. ಕಾಂಗ್ರೆಸ್ ಜೆಡಿಎಸ್ ನವರು ಏನೇ ಮಾತನಾಡಿದರೂ ನಾವು 15 ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಕಾರ ಯಾವ ಬಂಡಾಯ ನಮಗೆ ಸಮಸ್ಯೆ ಆಗಲ್ಲ. ಹಿಂದೆ ನಾನು ಹೇಳಿದಂತೆ ರಾಜ್ಯದಲ್ಲಿ 25 ಸಂಸದರು ಗೆಲುವು ಸಾಧಿಸುತ್ತಾರೆ. ವೀರಶೈವ ಸಮುದಾಯದವರು ಎಂದೂ ನಮ್ಮ ಕೈಬಿಡಲ್ಲ. ಎಲ್ಲರಿಗೂ ನಾನು ಸಿಎಂ ಆಗಿ ಮುಂದುವರಿಯಬೇಕಿದೆ. ಸಣ್ಣಪುಟ್ಟ ಗೊಂದಲ ಮರೆತು ಕೈಜೋಡಿಸಿ ಎಂದಿದ್ದೇನೆ ಎಂದು ಅವರು ಹೇಳಿದ್ದಾರೆ.