ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಅಸಾಮಾಧಾನಗೊಂಡಿರುವ ಕಾಂಗ್ರೆಸ್ ಅತೃಪ್ತ ಶಾಸಕರು ರೆಬಲ್ ಸ್ಟಾರ್ ಅಂಬರೀಶ್ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದ ಎ.ಬಿ.ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಮತ್ತು ರಾಜಶೇಖರ್ ಪಾಟೀಲ್ ಅವರು ಬೆಂಗಳೂರಿನ ಪ್ರೆಸ್ಟೀಜ್ ಅಪಾರ್ಟಮೆಂಟ್‌ನಲ್ಲಿರುವ ಅಂಬರೀಶ್ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.
ರೆಬಲ್ ಸ್ಟಾರ ಅಂಬರೀಶ್ ಅವರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎ.ಬಿ.ಮಾಲಕರೆಡ್ಡಿ, ನಾವು ಒಂದೇ ಹೆಚ್ಚೆ ಮುಂದೆ ಹೋಗಿದ್ದೇವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂದರೆ ನಾವು ಅದಕ್ಕೂ ಸಿದ್ಧ. ಈ ಕುರಿತು ಭಾನುವಾರ ಸಭೆ ನಡೆಸಿ ಚರ್ಚಿಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ