ಚನ್ನಪಟ್ಟಣದ ಜನರ ಹೃದಯದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ: ನಿಖಿಲ್ ಕುಮಾರಸ್ವಾಮಿ

Sampriya
ಬುಧವಾರ, 13 ನವೆಂಬರ್ 2024 (14:36 IST)
Photo Courtesy X
ಚನ್ನಪಟ್ಟಣ: ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸತತ ಹದಿನೆಂಟು ದಿನ ನನ್ನ ಪರವಾಗಿ ಒಂದು ಕ್ಷಣವು ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ನನ್ನ ಪರ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಮತದಾರರ ಹೃದಯದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕ್ಷೇತ್ರದ ಮತದಾನ ದಿನವಾದ ಬುಧವಾರ ತಾಲ್ಲೂಕಿನ ಕೆಂಗಲ್ ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಾರಂಭಿಕ ಹಂತದಲ್ಲಿ ನನಗೆ ಉಪ ಚುನಾವಣೆ ಅಭ್ಯರ್ಥಿಯಾಗುವ ಬಗ್ಗೆ ಭಾವನೆಗಳು ಇರಲಿಲ್ಲ. ಆದರೆ, ಕೆಲ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಭಾವನೆಗಳು ಬೆಲೆ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎದುರಿಸುವುದಕ್ಕೆ ತೀರ್ಮಾನಿಸಿದೆ ಎಂದರು.

ಕಳೆದ ಆರೂವರೆ ವರ್ಷಗಳ ಕಾಲ ಕುಮಾರಣ್ಣ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರದುದ್ದಕ್ಕೂ ಪ್ರಸ್ತಾಪ ಮಾಡಿದ್ದೇನೆ. ಮತದಾರರು ಅವರ ಹೃದಯದಲ್ಲಿ ಒಂದು ಸ್ಥಾನ ಕೋಡ್ತಾರೆ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.

ಮತದಾರರ ವಿಶ್ವಾಸ ಮೀರಿ ಸೇವೆ ಮಾಡುವ ದೃಢ ನಿರ್ಧಾರ ಮಾಡಿದ್ದೇನೆ. ಚನ್ನಪಟ್ಟಣದಲ್ಲಿ ಯುವ ಸಮುದಾಯ ಬಹಳ ದೊಡ್ಡ ಮಟ್ಟದಲ್ಲಿದೆ. ನಾನು ಹಳ್ಳಿಗಳಿಗೆ ಹೋದ ಸಂದರ್ಭದಲ್ಲಿ ಅಣ್ಣ- ತಮ್ಮಂದಿರಂತೆ ನನ್ನೊಂದಿಗೆ ಹೆಜ್ಜೆ ಹಾಕಿ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದಾರೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನೆಯಲ್ಲಿ ಮೇಲ್ಜಾತಿಯವರದ್ದೇ ಕಂಟ್ರೋಲ್ ಎಂದ ರಾಹುಲ್ ಗಾಂಧಿ: ಸೇನೆಯಲ್ಲೂ ಜಾತಿ ಹುಡುಕ್ತಿದ್ದಾರೆ ಎಂದ ಬಿಜೆಪಿ

Karnataka Weather: ಇಂದೂ ಇದೆ ಈ ಜಿಲ್ಲೆಗಳಿಗೆ ಮಳೆಯ ಸೂಚನೆ

ನಿಮ್ ಥರಾ ಟರ್ಪಲ್ ಹಾಕಿ ಬಡತನ ಮುಚ್ಚಿಡಲ್ಲ: ಬಿಜೆಪಿಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ರೈತರಿಗಾಗಿ ನಾಳೆ ನನ್ನ ಜನ್ಮದಿನವಾಗಿದ್ದರೂ ಹೋರಾಟಕ್ಕೆ ರೆಡಿ: ಬಿವೈ ವಿಜಯೇಂದ್ರ

ಅತ್ಯಂತ ನಿಷ್ಠಾವಂತ ರಾಜಕಾರಣಿ: ಹೆಚ್‌ವೈ ಮೇಟಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಮುಂದಿನ ಸುದ್ದಿ
Show comments