Select Your Language

Notifications

webdunia
webdunia
webdunia
webdunia

ಪ್ಯೂರ್ ವೆಜ್ ಎಂದಿದ್ದಕ್ಕೆ ಸುಧಾಮೂರ್ತಿಯನ್ನು ಟ್ರೋಲ್ ಮಾಡ್ತಿರೋದು ಸರೀನಾ?

ಪ್ಯೂರ್ ವೆಜ್ ಎಂದಿದ್ದಕ್ಕೆ ಸುಧಾಮೂರ್ತಿಯನ್ನು ಟ್ರೋಲ್ ಮಾಡ್ತಿರೋದು ಸರೀನಾ?
ಬೆಂಗಳೂರು , ಗುರುವಾರ, 27 ಜುಲೈ 2023 (09:10 IST)
ಬೆಂಗಳೂರು: ಇನ್ ಫೋಸಿಸ್ ಸಹ ಸಂಸ್ಥಾಪಕಿ, ಸಮಾಜ ಸೇವಕಿ ಸುಧಾಮೂರ್ತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಗೊಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಾನು ಪ್ಯೂರ್ ವೆಜಿಟೇರಿಯನ್ ಎಂದಿದ್ದು!

‘ಖಾನೆ ಮೇ ಕ್ಯಾ ಹೇ’ ಎನ್ನುವ ಯೂ ಟ್ಯೂಬ್ ಸಂದರ್ಸನವೊಂದರಲ್ಲಿ ಸುಧಾಮೂರ್ತಿ ತಾನು ಪಕ್ಕಾ ವೆಜಿಟೇರಿಯನ್. ನಾನ್ ವೆಜ್ ಅಡುಗೆಗೆ ಬಳಸಿದ ಸ್ಪೂನ್ ನನ್ನೇ ಸಸ್ಯಾಹಾರಿ ಅಡುಗೆಗೂ ಬಳಸಿದರೆ ಏನು ಮಾಡೋದು? ಅದಕ್ಕೇ ಹೊರ ದೇಶಕ್ಕೆ ಹೋಗುವಾಗಲೂ ಭಾರತೀಯ ಅಡುಗೆಗಳನ್ನು ಪ್ಯಾಕ್ ಮಾಡಿಕೊಂಡು ಹೋಗುತ್ತೇನೆ. ಇಲ್ಲವೇ ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ಹೊರದೇಶಕ್ಕೆ ಹೋಗುವಾಗ ನನ್ನ ಬ್ಯಾಗ್ ನಲ್ಲಿ ಒಂದು ಚಿಕ್ಕ ಕುಕ್ಕರ್ ಇಟ್ಟುಕೊಳ್ಳುತ್ತೇನೆ’ ಎಂದಿದ್ದರು. ಅವರ ಈ ಮಾತು ಕೆಲವು ಮಾಂಸಾಹಾರ ಪ್ರಿಯರಿಗೆ ಇಷ್ಟವಾಗಿಲ್ಲ.

ಇದೇ ಕಾರಣಕ್ಕೆ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅಂಥಾ ಸಸ್ಯಾಹಾರಿಯಾದರೆ ನೀವು ಯಾಕೆ ಸಾವಿರಾರು ರೇಷ್ಮೆ ಹುಳಗಳನ್ನು ಕೊಂದು ಮಾಡುವ ಸಿಲ್ಕ್ ಸ್ಯಾರಿಗಳನ್ನು ಉಡುತ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಅವರ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರು ನಾನ್ ವೆಜ್ ಅಡುಗೆಗಳನ್ನು ಹಿಡಿದಿರುವ ಫೋಟೋ ಪ್ರಕಟಿಸಿ ಹಾಗಿದ್ದರೆ ಸುಧಾಮೂರ್ತಿಯವರು ತಮ್ಮ ಅಳಿಯ, ಮಕ್ಕಳನ್ನು ಮುಟ್ಟುವಂತೆಯೇ ಇಲ್ಲ ಎಂದಿದ್ದಾರೆ. ಮತ್ತೆ ಕೆಲವರು ಸಮಾಜ ಸುಧಾರಕಿ ಎನ್ನುವ ಸೋಗು ಹೊರಗೆ, ಒಳಗೆ ಇನ್ನೂ ಮನಸ್ಸು ವಿಶಾಲವಾಗಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಆದರೂ ಸಸ್ಯಾಹಾರಿ ಪ್ರಿಯರು ಸುಧಾಮೂರ್ತಿಯವರನ್ನು ಸಮರ್ಥಿಸಿಕೊಂಡಿದ್ದಾರೆ. ಆಹಾರ ಎನ್ನುವುದು ಅವರವರ ಆಯ್ಕೆ. ಅವರ ಆಹಾರ ಅಭ್ಯಾಸವನ್ನು ಅವರು ಹೇಳಿದ್ದಾರೆ. ಅದಕ್ಕೆ ಅವರನ್ನು ಟ್ರೋಲ್ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾರೆ. ತಮ್ಮ ಆಯ್ಕೆಯ ಆಹಾರ ಅಭ್ಯಾಸವನ್ನು ಸುಧಾಮೂರ್ತಿ ಹೇಳಿಕೊಂಡಿದ್ದಕ್ಕೆ ಇಷ್ಟೊಂದು ಟ್ರೋಲ್ ಆಗುತ್ತಿರುವುದು ಸರೀನಾ? ನೀವೇ ಹೇಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದುವರೆದ ಮಳೆ: 7 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ