ಎಚ್ಚರ : ಕ್ಯೂಆರ್ ಕೋಡ್ ಸ್ಕ್ಯಾನ್ ನಿಂದ ನಿಮ್ಮ ಖಾತೆಗೇ ಕನ್ನ!

Webdunia
ಮಂಗಳವಾರ, 26 ಏಪ್ರಿಲ್ 2022 (11:06 IST)
ಕಾರವಾರ : ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆಸೆ ತೋರಿಸಿ, ಸೀಬರ್ಡ್ ನೌಕಾನೆಲೆಯ ಅಧಿಕಾರಿಯ ಪತ್ನಿಗೇ 1.17 ಲಕ್ಷ ರೂ. ವಂಚಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಮಹಿಳೆ ಆನ್ಲೈನ್ನಲ್ಲಿ ಉದ್ಯೋಗ ಮಾಹಿತಿ ಹುಡುಕುತ್ತಿದ್ದ ವೇಳೆ ಸಿಕ್ಕ ಶಾಪ್ಪೀ ಎಂಬ ಮೊಬೈಲ್ ಆ್ಯಪ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಂಡಿದ್ದರು. ಅದರಲ್ಲಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸಿ ಎಂಬ ಜಾಹೀರಾತನ್ನು ಕಂಡು, ತನ್ನ ವಾಟ್ಸಪ್ನಲ್ಲಿ ಸಂಪರ್ಕಕ್ಕೆ ಮುಂದಾಗಿದ್ದಾರೆ.

ವಂಚಕರು ಮೊದಲು ಕಮಿಷನ್ ರೂಪದಲ್ಲಿ ಅಲ್ಪ ಮೊತ್ತದ ಹಣವನ್ನು ಮಹಿಳೆಗೆ ಪಾವತಿಸಿದ್ದಾರೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ ಬಳಿಕ ಆ್ಯಪ್ ಸೂಚಿಸಿದ ಕೆಲವು ಟಾಸ್ಕ್ಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಟಾಸ್ಕ್ಗಳು ಪೂರ್ಣಗೊಳ್ಳುತ್ತಿದ್ದಂತೆ ವಂಚಕರು ಮಹಿಳೆಯ ಬ್ಯಾಂಕ್ ಖಾತೆಗೇ ಕನ್ನ ಹಾಕಿದ್ದಾರೆ.

ಮಹಿಳೆ ತನಗೆ ಹಣ ಬರುತ್ತದೆ ಎಂದು ನಂಬಿ, ವಂಚಕರು ತಿಳಿಸಿದಂತೆ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಅವರು ಕಳುಹಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದಾರೆ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಿದ್ದಂತೆ ಆಕೆಯ ಖಾತೆಯಿಂದ 1,17,600 ರೂ. ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೊಕ್ಕು ತಲೆಯ ಕೇತನ್ ಅಗರ್ವಾಲ್ ಕೊಲೆಗೆ ಅರ್ಹರಾಗಿದ್ದರು ಎಂದ ಯುವತಿ: ಇದೆಂಥಾ ಮನಸ್ಥಿತಿ Video

ರಾಮಮಂದಿರ ಲೂಟಿ ವಿಚಾರದಲ್ಲಿ ಮೋದಿ ಮೌನ ಜನರ ನಂಬಿಕೆ ಮೇಲಿನ ದಾಳಿ

ಸಿಎಂ ಡಿಕೆ ಶಿವಕುಮಾರ್ ಮನೆಯಿಂದಲೇ ಶುರು ಎಸ್ಐಆರ್: ಏನೆಲ್ಲಾ ವಿವರ ಕೊಟ್ರು ನೋಡಿ Video

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಇದೆಂಥಾ ದುರವಸ್ಥೆ..ಅಜ್ಜಿಯನ್ನು ಬದುಕಿಸಲು ತಾವೇ ಸ್ಟ್ರೆಚರ್ ಎಳೆದ ಪುಟ್ಟ ಕಂದಮ್ಮಗಳು Video

ಮುಂದಿನ ಸುದ್ದಿ
Show comments