Webdunia - Bharat's app for daily news and videos

Install App

ಯುದ್ಧ ಸನ್ನಿವೇಶ; ಕರ್ತವ್ಯದ ಕರೆಗೆ ಓಗೊಟ್ಟ ವೀರ ಸೈನಿಕರು

Webdunia
ಗುರುವಾರ, 28 ಫೆಬ್ರವರಿ 2019 (20:38 IST)
ಭಾರತ ಮತ್ತು ಪಾಕಿಸ್ತಾನ ದೇಶದ ನಡುವೆ ಯುದ್ಧ ಸನ್ನಿವೇಶ ನಿರ್ಮಾಣವಾಗಿದೆ. ಈ ಸಾಧ್ಯತೆ ಹಿನ್ನೆಲೆ ಧೀಡಿರನೆ ಸೇನಾಧಿಕಾರಿಗಳಿಂದ ಸೈನಿಕರಿಗೆ ಬುಲಾವ್ ಬಂದಿದೆ. ರಜಾ ಎಂದು ಬಂದ ಸೈನಿಕರನ್ನು ಸೇನೆ ವಾಪಸು ಕರೆಯಿಸಿಕೊಳ್ಳುತ್ತಿದೆ. ರಜೆಕ್ಕೆಂದು ಬಂದಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸೈನಿಕರು ಇಂದು ಮತ್ತೆ ಸೇನೆ ಸೇರಿಕೊಳ್ಳಲು ರೈಲಿನ ಮುಖಾಂತರ ಪಯಣ ಬೆಳೆಸಿದರು.

ಯಾದಗಿರಿ ಜಿಲ್ಲೆಯ ಸುರಪುರ ನಗರದ ನಿವಾಸಿ ರಾಜಮಣಿ ಹಾಗೂ ಮಧ್ಯಪ್ರದೇಶ ಮೂಲದ ರಾಜೇಶ್ ಎನ್ನುವ ಯೋಧ CRSF ತುಕಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಮಣಿ ಕಳೆದ ಎರಡು ದಿನಗಳಿಂದ ಸಂಬಂಧಿ ರಾಜೇಶ್ ನೊಂದಿಗೆ ಯಾದಗಿರಿಗೆ ಬಂದಿದ್ದರು. ದೇಶದ ಪ್ರಮುಖ ನಗರಗಳಲ್ಲಿ  ಹೈ ಅಲರ್ಟ್ ಘೋಷಣೆ ಹಿನ್ನೆಲೆ ಸೇನಾಧಿಕಾರಿಗಳಿಂದ ಬುಲಾವ್ ಬಂದ ಕಾರಣ ಧೀಡಿರನೆ ಬೆಂಗಳೂರಿಗೆ ಪ್ರಯಾಣ ಬೆಳಿಸಿದ್ದಾರೆ.

ಇನ್ನೂ ರಾಜಮಣಿಯ ಹೆಂಡತಿ, ನಾದಿನಿ, ಅಳಿಯ ಎಲ್ಲರೂ ದೇಶದ ಬೆರೆ ಬೆರೆ ಗಡಿಯಲ್ಲಿ BSF, CRSF ತುಕಡಿಯಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ರಾಜಮಣಿ ಹಾಗೂ ರಾಜೇಶ್ ರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದ ರಕ್ಷಣೆಗೆ ನೇಮಿಸಲಾಗಿದೆ. ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ, ನಮ್ಮ ದೇಶದ ರಕ್ಷಣೆಗಾಗಿ ನಾವು ಎಂಥ ತ್ಯಾಗಕ್ಕೂ ಸಿದ್ಧ ಎಂದು ಸೈನಿಕರು ಹೇಳಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments