ವಕ್ಫ್‌ ವಿವಾದ: ಜಮೀರ್‌ ಪರ ಹೋಗುವ ಸಿದ್ದರಾಮಯ್ಯಗೆ ಈಶ್ವರಪ್ಪ ಎಚ್ಚರಿಕೆ

Sampriya
ಸೋಮವಾರ, 4 ನವೆಂಬರ್ 2024 (18:04 IST)
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂಗಳು, ರೈತರು ಹಾಗೂ ಈ ನಾಡಿನ ಮಣ್ಣಿನ ಮೇಲೆ ಗೌರವ ಇದ್ದಲ್ಲಿ ಕೂಡಲೇ ವಕ್ಫ್  ಹೆಸರು ಬಂದಿರುವ ಪಹಣಿಯನ್ನು ರದ್ದು ಮಾಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಗ್ರಹ ಮಾಡಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ವಿಚಾರದಲ್ಲಿ ಮುಸ್ಲಿಮರ ಧೋರಣೆಯಿಂದ ಅವರ ಸಮಾಜ ಅಧೋಗತಿಗೆ ಹೋಗಲಿದೆ. ಈ ಬೆಳವಣಿಗೆ ಇತರೆ ರಾಜ್ಯದಲ್ಲೂ ಆಗುತ್ತಿದ್ದು, ಕೇಡುಗಾಲ ಬಂದಿದೆ ಎಂದರು.

ಹಿಂದೂ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದು,  ವಕ್ಫ್ ಆಸ್ತಿ ವಿವಾದದಿಂದ ಮಠ ಮಂದಿರಗಳಿಗೆ, ರೈತರಿಗೆ, ದಲಿತರಿಗೆ ಅನ್ಯಾಯ ಆಗಿದೆ ಎಂದು ಕಿಡಿಕಾರಿದ್ದಾರೆ.

ಮೊದಲ ಬಾರಿ ಸಾಧು ಸಂತರು ಹಿಂದೂಗಳ ಆಸ್ತಿ ಉಳಿವಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಾಧು ಸಂತರು ಜಾಗೃತರಾಗಿರುವುದು ಸಂತೋಷದ ವಿಷಯ. ಸಾಧು ಸಂತರ ಆಹ್ವಾನದ ಮೇರೆಗೆ ಆಸ್ತಿ ಪರಿಶೀಲನೆಗೆ ಹೋಗುತ್ತಿದ್ದೇನೆ.

1.10 ಲಕ್ಷ ಎಕರೆ ವಕ್ಪ್ ಆಸ್ತಿ ಆಗಿದೆ ಎಂದು ಜಮೀರ್ ವಿಧಾನಸೌಧದಲ್ಲಿ ಹೇಳಿದ್ದಾರೆ. ಇದರ ವಿರುದ್ಧ ಜನ ಯಾವುದೇ ಕೋರ್ಟ್‍ಗೆ ಹೋಗುವ ಹಾಗೆ ಇಲ್ಲ. ಮುಸ್ಲಿಮರು ಇಲ್ಲದ ಕಡೆ ಹಾಗೂ ಶಾಲಾ ಆಸ್ತಿಯನ್ನು ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ವಕ್ಫ್ ಆಸ್ತಿ ಎಂದು ಇರುವ ಪಹಣಿಯನ್ನು ತಕ್ಷಣ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಮುಂದಿನ ಸುದ್ದಿ
Show comments