ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್ ಕಾಲೇಜು 20 ನೇ ಅಂತರ್ ಕಾಲೇಜು ಯುವಜನೋತ್ಸವ ಇನ್ ಸಿಗ್ನೀಯಾ 2019-20 ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ನವೆಂಬರ್ 6 ರಿಂದ 9 ರವರೆಗೆ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜು ಪ್ರಾಚಾರ್ಯ ಡಾ. ಎಸ್.ಬಿ. ವಣಕುದರೆ ತಿಳಿಸಿದ್ದಾರೆ.
ಧಾರವಾಡದ ಕಾಲೇಜಿನಲ್ಲಿ ನವೆಂಬರ್ 6 ರಂದು ಮದ್ಯಾಹ್ನ 3ಕ್ಕೆ ಎಸ್.ಡಿ.ಎಂ.ಇ. ಸಂಸ್ಥೆ ಅಧ್ಯಕ್ಷ ಡಾ. ಡಿ. ವಿರೇಂದ್ರ ಹೆಗ್ಗಡೆ ಯುವಜನೋತ್ಸವಕ್ಕೆ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಹಾಗೂ ಸಚಿವ ಜಗದೀಶ್ ಶೆಟ್ಟರ್, ಕೊಳಲು ವಾದಕ ಪ್ರವೀಣ ಗೊಡ್ಖಿಂಡಿ ಆಗಮಿಸುವರು.
ಇನ್ ಸಿಗ್ನೀಯಾದಲ್ಲಿ ಸಂಗೀತ, ನೃತ್ಯ, ನಟನೆ, ಚಿತ್ರಕಲೆ ಸೇರಿದಂತೆ ವೈವಿದ್ಯಮಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ನೇಹಮಯ ವಾತಾವರಣ ನಿರ್ಮಿಸುವ ಜೊತೆಗೆ ಶಿಸ್ತು ಮತ್ತು ಶಾಂತತೆ ವೃದ್ಧಿಸುವ ಆಶಯ ಯುವಜನೋತ್ಸವದ್ದಾಗಿದೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ 100 ಕ್ಕೂ ಹೆಚ್ಚು ಕಾಲೇಜಿನ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ.