ಕಬ್ಬು ಬೆಳೆಗಾರರಿಂದ ಮತದಾನ ಬಹಿಷ್ಕಾರ

Webdunia
ಶನಿವಾರ, 3 ನವೆಂಬರ್ 2018 (16:06 IST)
ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಎನ್.ಎಸ್.ಎಲ್ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಂದ ಮತದಾನ ಬಹಿಷ್ಕಾರ ಹಾಕಲಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಕಾರ್ಖಾನೆಯಲ್ಲಿ ಕಬ್ಬು ಕಟಾವು ಕೂಲಿ ಏರಿಕೆ ಹಾಗೂ ಒಂದೇ ಕಂತಿನಲ್ಲಿ ಕಬ್ಬಿನ ಹಣ ನೀಡದಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

ರೈತರ ನೆರವಿಗೆ ಬಾರದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಧೋರಣೆಗೆ ಖಂಡಿಸಿ ಮತದಾನ ಬಹಿಷ್ಕಾರ ಹಾಕಿದ್ದಾಗಿ ರೈತರು ತಿಳಿಸಿದ್ದಾರೆ.

450 ರೂ. ಇದ್ದ ಕಬ್ಬು ಕಟಾವು ದರವನ್ನ ಏಕಾಏಕಿ 650 ರೂ. ಗೆ ಏರಿಕೆ ಮಾಡಿರುವುದಕ್ಕೆ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 2612 ರೂ. ನಿಗದಿ ಮಾಡಿದ್ರೂ ಮೊದಲ ಕಂತಿನಲ್ಲಿ 1,500 ರೂ. ನೀಡಲಾಗುತ್ತಿದೆ. ಕಬ್ಬು ಪೂರೈಕೆಯಾಗಿ ಎರಡು ತಿಂಗಳ ಬಳಿಕ ಮೊದಲ ಕಂತಿನ ಹಣ ನೀಡುತ್ತಿರುವ ಕಾರ್ಖಾನೆ ಆಡಳಿತ ಮಂಡಳಿಯು ಉಳಿಕೆ ಹಣ ನೀಡುವ ಕುರಿತು ರೈತರಿಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ.  

ಕಾರ್ಖಾನೆಯ ರೈತ ವಿರೋಧಿ ನೀತಿ ಖಂಡಿಸಿ ಕಳೆದ 4 ದಿನಗಳಿಂದ ರೈತರು ಪ್ರತಿಭಟಿಸುತ್ತಿದ್ದಾರೆ. ರೈತರ ಬೇಡಿಕೆ ಈಡೇರಿಕೆಗೆ ಕಾರ್ಖಾನೆ ಆಡಳಿತ ಮಂಡಳಿ ನಿರಾಸಕ್ತಿ ವಹಿಸಿದೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಉತ್ತರಾಧಿಕಾರಿ ಚರ್ಚೆ ಆಮೇಲೆ ಇಟ್ಕೊಳ್ಳಿ, ಮೊದಲು ಅಭಿವೃದ್ಧಿ ಮಾಡಿ: ಎನ್ ರವಿಕುಮಾರ್

ಕೊನೆಗೂ ಯತೀಂದ್ರ ಸಿದ್ದರಾಮಯ್ಯಗೆ ಗುಮ್ಮಿದ ಡಿಕೆ ಶಿವಕುಮಾರ್ ಹೇಳಿದ್ದೇನು

ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ..: ಪ್ರತಾಪ್ ಸಿಂಹ ವಾರ್ನಿಂಗ್

ಆರ್ ಎಸ್ಎಸ್ ಚಡ್ಡಿ ಲೇವಡಿ ಮಾಡಿದ್ದ ಕಾಂಗ್ರೆಸ್: ಜವಹರಲಾಲ್ ನೆಹರೂ ಫೋಟೋ ರಿಲೀಸ್ ಮಾಡಿದ ಬಿಜೆಪಿ

ಕರ್ನೂಲ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಮೋದಿ: ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments