Select Your Language

Notifications

webdunia
webdunia
webdunia
webdunia

ವಕೀಲರ ಸಂಘದಿಂದ ವಿಶ್ವನಾಥ್ ಗೆ ಸನ್ಮಾನ

ವಕೀಲರ ಸಂಘದಿಂದ ವಿಶ್ವನಾಥ್ ಗೆ ಸನ್ಮಾನ
ರಿಯಾಯ್ತಿ ದರದಲ್ಲಿ ಬಿಡಿಎ ಫ್ಲ್ಯಾಟ್ ಗಳನ್ನು ನೀಡಲು ಮುಂದಾಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರನ್ನ ವಕೀಲರ ಸಂಘದಿಂದ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ರಿಯಾಯ್ತಿ ದರದಲ್ಲಿ ಫ್ಲ್ಯಾಟ್ ನೀಡುವಂತೆ ನಮ್ಮ ಸಂಘ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿರುವ ವಿಶ್ವನಾಥ್ ಮತ್ತು ಬಿಡಿಎ ಆಯುಕ್ತ ಕುಮಾರ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಅಲ್ಲದೇ, ಬಿಡಿಎ ಉಸ್ತುವಾರಿಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಹಾಗೆ ಆದಷ್ಟೂ ಶೀಘ್ರದಲ್ಲಿ ಫ್ಲ್ಯಾಟ್ ಖರೀದಿಸುವ ಪ್ರಕ್ರಿಯೆಯನ್ನು ಸಂಘದ ವತಿಯಿಂದ ಆರಂಭಿಸಲಾಗುವುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ನಾಯಕರ ಭೇಟಿ ಮಾಡಿದ ಹೆಚ್ ವಿಶ್ವನಾಥ್