Publish Date: Tue, 19 May 2026 (10:53 IST)
Updated Date: Tue, 19 May 2026 (10:56 IST)
ಈ ಕಾಲದಲ್ಲಿ ಎಲ್ಲರೂ ಚುಟುಕಾದ ಹೆಸರಿಡುತ್ತಾರೆ. ಆದರೆ ಇಲ್ಲೊಬ್ಬ ಬಾಲಕನ ಹೆಸರು ಕೇಳಿದರೆ ನೀವೇ ಶಾಕ್ ಆಗ್ತೀರಿ. ಇದನ್ನು ನೆನಪಿಟ್ಟುಕೊಳ್ಳುವವರಿಗೆ ಬಹುಮಾನವೇ ಕೊಡಬೇಕಾಗಬಹುದು.
ಹಳೆಯ ಕಾಲದಲ್ಲಿ ತಂದೆ ತಾಯಿ, ಅಜ್ಜ-ಅಜ್ಜಿಯ ಹೆಸರನ್ನು ಸೇರಿಸಿ ಮಕ್ಕಳಿಗೆ ಹೆಸರಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎರಡು ಅಥವಾ ಮೂರು ಅಕ್ಷರದ ಹೆಸರನ್ನೇ ಜನ ಹೆಚ್ಚಾಗಿ ತಮ್ಮ ಮಕ್ಕಳಿಗೆ ಇಡುತ್ತಾರೆ.
ಆದರೆ ಈ ಬಾಲಕ ಮಾತ್ರ ಇದಕ್ಕೆ ತದ್ವಿರುದ್ಧ. ಈ ಪುಟ್ಟ ಬಾಲಕನ ಹೆಸರು ಮಾಧವ ನಾರಾಯಣ ಹೆಮ್ಮಿಗೆ ಪ್ರಶಾಂತ್ ಸಾರಂಗಪಾಣಿ ದೇಶಿಕಾಚಾರ್ ಲಕ್ಷ್ಮೀ ನಾರಾಯಣ ಪುರುಷೋತ್ತಮ ನರಸಿಂಹ ಶ್ರೀನಿವಾಸ ಅಯ್ಯಂಗಾರ್!
ಮಾಧವ ಎಂದು ಶಾರ್ಟ್ ಆಗಿ ಈತನನ್ನು ಕರೆಯುತ್ತಾರಂತೆ. ಆತನ ತಂದೆ-ತಾಯಿ, ಅಜ್ಜ-ಅಜ್ಜಿ ಸೇರಿ ಆತನಿಗೆ ಇಷ್ಟು ಉದ್ದದ ಹೆಸರು ಇಟ್ಟಿದ್ದಾರಂತೆ. ಈತನ ಹೆಸರಿನ ಜೊತೆ ಅಜ್ಜ-ಅಜ್ಜಿಯರ ಹೆಸರೂ ಸೇರಿಸಲಾಗಿದೆ. ಈತನ ವಿವರಣೆ ಕೇಳಿ ನೆಟ್ಟಿಗರು ಪರೀಕ್ಷೆ ಪತ್ರಿಕೆಯಲ್ಲಿ, ಅಂಕಪಟ್ಟಿಯಲ್ಲಿ ಈತನ ಹೆಸರು ಹೇಗೆ ಬರೆಯುತ್ತಾರಪ್ಪಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ