Publish Date: Fri, 10 Nov 2017 (15:53 IST)
Updated Date: Fri, 10 Nov 2017 (16:20 IST)
ಯಾವುನೋ ಹುಚ್ಚ ಕಳುಹಿಸಿದ ನೋಟಿಸ್‌ಗೆ ಹೆದ್ರಬೇಕಾ? ಇಂತಹ ನೂರು ನೋಟಿಸ್ ಬಂದರೂ ಹೆದರುವುದಿಲ್ಲ ಎಂದು ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ನಮಗೆ ನಮ್ಮ ಹಕ್ಕು ದೊರೆಯಲೇಬೇಕು. ಹಕ್ಕು ದೊರೆಯುವವರೆಗೆ ಹೋರಾಟ ನಿಲ್ಲದು ಎಂದು ಗುಡುಗಿದ್ದಾರೆ.
ಪ್ರತ್ಯೇಕ ಲಿಂಗಾಯುತ ಧರ್ಮ ಹೋರಾಟ ವಿರೋಧಿಸಿ ನಿವೃತ್ತ ಐಎಎಸ್ ಅಧಿಕಾರಿ ಶಶಧರ್ ಶಾನಭೋಗ್ ಎನ್ನುವವರು ಸಚಿವ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿ ನೋಟಿಸ್ ರವಾನಿಸಿದ್ದಾರೆ.
ಕೆಲವರು ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಂತಹ ದುಷ್ಟಶಕ್ತಿಗಳಿಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಲಿಂಗಾಯುತ ಸಮಾವೇಶದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿರುವುದು ನೋಡಿದ ವೀರಶೈವರ ಜಂಘಾಬಸ ಉಡುಗಿ ಕುಸಿದು ಹೋಗಿದೆ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.