Publish Date: Fri, 23 Sep 2022 (14:21 IST)
Updated Date: Fri, 23 Sep 2022 (14:25 IST)
ಪುರಸಭೆ ಸದ್ಯಸನ ರಂಪಾಟ, ಗಲಾಟೆ, ದರ್ಪ ಹಿನ್ನೆಲೆ ಪುರಸಭೆ ಸದಸ್ಯನ ವಿರುದ್ಧ ಎಫ್ ಐಆರ್ ದಾಖಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ಪುರಸಭೆ ಸದಸ್ಯ ಭೀಮಣ್ಣ ಕಲಾಲ ವಿರುದ್ದ ಎಫ್ಐಆರ್ ದಾಖಲಾಗಿದೆ. ಪುರಸಭೆ ಸಿಬ್ಬಂದಿ ಬಂಧಗಿಸಾಬ್ ಮಂಡೆಗೆ ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಪುರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿರುವ ಬಂಧಗಿಸಾಬ್‌ಗೆ ಮನೆ ಉತಾರೆ ಕೊಡಲು ಭೀಮಣ್ಣಾ ಕಲಾಲ ಅರ್ಜಿ ಕೊಟ್ಟಿದ್ದಾರೆ. ಅರ್ಜಿ ಕೊಟ್ಟ ಕ್ಷಣವೇ ಉತಾರೆ ಕೊಡಲು ಭೀಮಣ್ಣ ಪಟ್ಟು ಹಿಡದಿದ್ದಾರೆ. ಆದಕ್ಕೆ ಬಂಧಗಿಸಾಬ ಒಪ್ಪದ ಕಾರಣ ಭೀಮಾಣ್ಣ ಗಲಾಟೆ ಮಾಡಿದರು. ಅದಕ್ಕಾಗಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.