Daily Horoscope

Select Your Language

Notifications

webdunia
webdunia
webdunia
webdunia

ರೈತರಿಗೆ ಪರಿಹಾರ ಕೊಡಲು ಆಗದಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ: ವಿಜಯೇಂದ್ರ

BY Vijayendra
ಬೆಂಗಳೂರು: ರೈತರಿಗೆ ಪರಿಹಾರ ಕೊಡಲು ಆಗದಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ. 
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ನೆರವಿಗೆ ಬರದಿದ್ರೆ ಸರ್ಕಾರ ಸತ್ತಂತೆ ಎಂದು ಆಕ್ಷೇಪಿಸಿದರು. ಬಿಡದಿ ಟೌನ್ ಶಿಪ್ ಮಾಡಲು, ಸುರಂಗ ರಸ್ತೆ ಮಾಡುವ ಆಸಕ್ತಿಯನ್ನೇ, ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡುವಲ್ಲಿ ತೋರುವ ಉತ್ಸಾಹವನ್ನೇ ಸಿಎಂ, ರೈತರ ಸಂಕಷ್ಟಕ್ಕೂ ಮಿಡಿಯುವಲ್ಲಿ ಸರ್ಕಾರ ತೋರಲಿ. ಅನ್ನದಾತರಿಗೆ ನೆರವು ನೀಡದಿದ್ದರೆ ಸರ್ಕಾರ ಬದುಕಿದ್ದೂ ಸತ್ತಂತೆ ಎಂದು ಟೀಕಿಸಿದರು.
 
ಕೇಂದ್ರ ಸರ್ಕಾರಕ್ಕೆ ಅನುದಾನಕ್ಕೆ ಕಾಯದೆ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರ ನೀಡಿದ್ದರು. ಹಣಕಾಸು ನಿರ್ವಹಣೆಯಲ್ಲಿ ವಿಫಲವಾದ ಸರ್ಕಾರ ರೈತರನ್ನು ಬಲಿಪಡೆಯದಿರಲಿ ಎಂದರು.
 
ಭದ್ರಾ ಮೇಲ್ದಂಡೆ ಯೋಜನೆಯ ಯಶಸ್ಸು ಸಿಗಬೇಕಾಗಿರುವುದು ಬಿಜೆಪಿಗೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದ ಫಲವಾಗಿ ಈ ಯೋಜನೆಗೆ ಚಾಲನೆ ನೀಡಿ ಇಂದು ಸಾಕಾರವಾಗಿದೆ. ಆದರೆ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವೇ ಮಾಡಿದ್ದು ಎಂಬಂತೆ ಬಿಂಬಿಸಿ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಚಿತ್ರದುರ್ಗದ ಗೋನೂರು ಕೆರೆ ತುಂಬಿದ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ರೈತರಿಂದ ಸನ್ಮಾನ ಮಾಡಿಸಿಕೊಳ್ಳಲು ಸಿಎಂ ಆತುರರಿಂದ ಹೋಗಿದ್ದಾರೆ. ಅಲ್ಲಿನ ನೀರಾವರಿ  ಇಲಾಖೆ ಮತ್ತು ಜಿಲ್ಲಾಡಳಿತ ದೊಡ್ಡ ಕಾರ್ಯಕ್ರಮ ಮಾಡಲು ಮುಂದಾಗಿದ್ದರು. ಆದರೆ ನೀತಿ ಸಂಹಿತೆ ಇದೆ ಎಂದು ರೈತರಿಂದ ಸಿಎಂಗೆ ಸನ್ಮಾನ ಎಂದು ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ದೂರಿದರು. 
 
ಭದ್ರಾ ಮೇಲ್ದಂಡೆ ವಿಚಾರದಲ್ಲಿ ನಿಜವಾಗಿ ಅಭಿನಂದನೆ ಸಲ್ಲಬೇಕಾಗಿರುವುದು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ. ಈ ಯೋಜನೆಗೆ ರೂ.700 ಕೋಟಿ ನೀಡಿ ಚಾಲನೆ ನೀಡಿದ್ದು ಯಡಿಯೂರಪ್ಪ. ಬಿಜೆಪಿ ಅವಧಿಯಲ್ಲಿ ರೂ. 11,500  ಕೋಟಿ ಯೋಜನೆಗೆ ನೀಡಿದ್ದರು. ಆದರೆ ಇದೆಲ್ಲವನ್ನೂ ಮರೆತು ಡಿಕೆಶಿ ಅವರು ತಾವು ರೈತರಿಂದ ಶಹಬ್ಬಾಸ್ ಹಗಿರಿ ಪಡೆಯುವುದು ಎಷ್ಟು ಸರಿ ಎಂದು  ಪ್ರಶ್ನಿಸಿದರು. 
 
ಶಿಕಾರಿಪುರ, ಶಿರಾಳಕೊಪ್ಪ ಭಾಗದಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಕಡೆ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ರಿಂಗ್ ರಸ್ತೆ ಮಾಡಲು ರೈತರ ಫಲವತ್ತಾದ ಜಮೀನು ಕಸಿಯಲು ರಾಜ್ಯ ಸರ್ಕಾರ ಮುಂದಾಗಿದೆ. ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಬಿಡದಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಏಳು ತಾಸು ವಿದ್ಯುತ್ ನೀಡದ ಈ ಸರ್ಕಾರ ರೈತರ ಜಮೀನನ್ನು ಮಾತ್ರ ಬಲವಂತವಾಗಿ ಕಸಿಯಲು ಬರುತ್ತಿದೆ. ಇದಕ್ಕೆ ಅವಕಾಶ ನೀಡಲ್ಲ, ಸಿಎಂ ಈ ಬಗ್ಗೆ ಎಚ್ಚರವಹಿಸಲಿ ಎಂದು ಎಚ್ಚರಿಸಿದರು. 
 
ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಅಧಿಕಾರದ ಮದದಿಂದ, ದರ್ಪದಿಂದ ವಿರೋಧ ಪಕ್ಷದ ಶಾಸಕರು ಮತ್ತು ಮುಖಂಡರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬಿ.ಪಿ. ಹರೀಶ್ ಅವರ ಬಗ್ಗೆ, ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾರೆ. ವಿರೋಧಪಕ್ಷವಾಗಿ ಬಿಜೆಪಿ ಇದನ್ನು ಖಂಡಿಸಲಿದೆ. ಇವರ ವಿರುದ್ಧ ಸ್ವಯಂಪ್ರೇರಿತ ಎಫ್‍ಐಆರ್ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮವನ್ನು ಗೃಹಸಚಿವರು ಮತ್ತು ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 
ಕೆಲವು ಸಚಿವರಿಗೆ ಮಾಡಲು ಏನೂ ಕೆಲಸವಿಲ್ಲ. ಅವರಿಗೆ ಯೋಗ್ಯತೆ ಸಹ ಇಲ್ಲ. ಅಧಿವೇಶನ ನಡೆಯುವಾಗ ವಿದೇಶ ಪ್ರವಾಸ ಮಾಡ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು. 
 
ಮಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳು ಅಲ್ಲಿನ ಜನರಿಗೆ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದಾರೆ. ನಮ್ಮ ಕಿವಿಗೆ ಹೂ ಇಡಲು ಬರಬೇಡಿ. ಆರ್ಥಿಕ ಇಲಾಖೆ ಪತ್ರ ಬರೆÀದಿದೆ ಎಂದರೆ ಕಾಟಾಚಾರಕ್ಕೆ ಅಲ್ಲ. ಮೂರು ವರ್ಷದಿಂದ ಹೊಸ ಯೋಜನೆ ಇಲ್ಲ. ವಿಶೇಷಚೇತನರಿಗೆ ಪಿಂಚಣಿ ನೀಡ್ತಾ ಇಲ್ಲ. ಹಾಲಿಗೆ ಪೆÇ್ರೀತ್ಸಾಹಧನ, ವಿಧವಾವೇತನ ಇಲ್ಲ. ವಿದ್ಯುತ್ ಸರಿಯಾಗಿ ಇಲ್ಲ. ದಿವಾಳಿಯತ್ತ ನಮ್ಮ ಆರ್ಥಿಕ ಪರಿಸ್ಥಿತಿ ಬಂದಿದೆ ಎಂದರು .
ಗ್ಯಾರಂಟಿ ಜಾರಿ ಮಾಡಿ ತೆಲಂಗಾಣದಲ್ಲಿ ಅಧಿಕಾರಿಗಳಿಗೆ ವೇತನ ನೀಡಲು ಆಗ್ತಾ ಇಲ್ಲ ಎಂದು ಸಿಎಂ ಹೇಳಿದ್ದರು. ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿಗಳಿಂದ ಹಣ ಇಲ್ಲದೆ ಭಕ್ತರ ಕಾಣಿಕೆಯಲ್ಲಿ ಸರ್ಕಾರ ಪಾಲು ಕೇಳಿತ್ತು. ನಮ್ಮ ರಾಜ್ಯದಲ್ಲಿ ವೇತನ ನೀಡಲೂ ಹಣ ಇಲ್ಲದಾಗಿದೆ.  ಶಕ್ತಿ ಯೋಜನೆ ಬಾಕಿ ಇದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದರು. 
 
ಆರ್ಥಿಕ ಇಲಾಖೆ ಪತ್ರ ಹಿಂದೆಯೂ ಬಂದಿದೆ. ಆದರೆ ರಾಜ್ಯಕ್ಕೆ ಇಂತಹ ದರಿದ್ರ ಪರಿಸ್ಥಿತಿ ಯಾವಾಗಲೂ ಬಂದಿಲ್ಲ. ಇವರು ಮೂರು ವರ್ಷದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದಾರೆ. ಸಿಎಂ ಉಪದೇಶ ಬಿಟ್ಟು ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು. 
 
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಬಿಟ್ಟರೆ ಸಾಲದು. ಹಿಂದೆ ಬಿಜೆಪಿ ಇದ್ದಾಗ ನೀಡಿದಂತೆ ಪರಿಹಾರ ನೀಡಲಿ. ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯದೆ, ವಿಶೇಷ ಅಧಿವೇಶನ ಮಾಡದೆ ಸಾವಿರಾರು ಕೋಟಿ ಹಣವನ್ನು ಬರಕ್ಕೆ ಬಿಡುಗಡೆ ಮಾಡಿತು. ಸಾಲ ಮನ್ನಾ ಮಾಡಿದ್ದಾರೆ. ಸಮಯ ವ್ಯರ್ಥ ಮಾಡದೆ ರೈತರಿಗೆ ಆತ್ಮಸ್ಥೈರ್ಯ ತುಂಬಿ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ದರಿದ್ರ ಆರ್ಥಿಕ ಪರಿಸ್ಥಿತಿ, ಕಿವಿಗೆ ಹೂ ಇಡುತ್ತಿದ್ದಾರೆ ಸಿಎಂ: ಬಿ.ವೈ. ವಿಜಯೇಂದ್ರ ವಾಗ್ದಾಳಿ