Daily Horoscope

Select Your Language

Notifications

webdunia
webdunia
webdunia
webdunia

Video: ಪ್ರಿಯಾಂಕ್ ಖರ್ಗೆಗೆ ಆರ್ ಎಸ್ಎಸ್ ಡೀಟೈಲ್ ಕೊಡ್ತೀರಾ ಎಂದಿದ್ದಕ್ಕೆ ಮೋಹನ್ ಭಾಗವತ್ ಒಂದೇ ಅಕ್ಷರ ಉತ್ತರ

Mohan Bhagawat on RSS registration
ಬೆಂಗಳೂರು: ಪ್ರಿಯಾಂಕ್ ಖರ್ಗೆಗೆ ಆರ್ ಎಸ್ಎಸ್ ಬಗ್ಗೆ ಡೀಟೈಲ್ ಕೊಡ್ತೀರಾ ಎಂದು ಮೋಹನ್ ಭಾಗವತ್ ಗೆ ಕೇಳಿದ್ದಕ್ಕೆ ಅವರು ಒಂದೇ ವಾಕ್ಯದಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಆರ್ ಎಸ್ಎಸ್ ವಿರುದ್ಧ ಕೆಂಡ ಕಾರುತ್ತಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈಗ ಲಿಖಿತವಾಗಿ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸಂಘದ ಚಟುವಟಿಕೆಗಳು, ಹಣಕಾಸಿನ ವಹಿವಾಟುಗಳು, ನೋಂದಣಿ ಮಾಡಿಕೊಳ್ಳುವ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದೇ ವಿಚಾರವಾಗಿ ಕೇರಳದ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ‘ನಾನು ಪ್ರತಿಕ್ರಿಯೆ ನೀಡಬೇಕಾಗಿಲ್ಲ’ ಎಂದಿದ್ದಾರೆ.

ಬಳಿಕ ಮುಂದುವರಿದ ಅವರು ‘ಇಲ್ಲಿ ಇನ್ನೂ ಎಷ್ಟೋ ನೋಂದಣಿಯಾಗದ ವಿಷಯಗಳು ನಡೆಯುತ್ತಿವೆ. ನಾವು ಏನನ್ನೂ ಗುಟ್ಟಾಗಿ ಇಟ್ಟಿಲ್ಲ. ನಮ್ಮ ಕಾರ್ಯಕ್ರಮಗಳು ಮೈದಾನಗಳಲ್ಲೇ ನಡೆಯುತ್ತದೆ. ಎಲ್ಲವೂ ಬಹಿರಂಗವಾಗಿಯೇ ನಡೆಯುತ್ತದೆ. ನಮ್ಮ ಕಾರ್ಯಕರ್ತರು ನಮ್ಮೆಲ್ಲರ ನಡುವೆ ಎಲ್ಲರಲ್ಲಿ ಒಂದಾಗಿ ಇದ್ದಾರೆ.  ನಾವು ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಕೇಳುತ್ತಿಲ್ಲ. ಸರ್ಕಾರದಿಂದ ಕೇಳುತ್ತೇವೆ ಎಂದಾದರೆ ನೋಂದಣಿ ಮಾಡಿಕೊಳ್ಳಬೇಕು.

ಸಂಘ ಆರಂಭವಾದ ಬಳಿಕ ಎರಡು ಬಾರಿ ನಮ್ಮ ಸಂಘಟನೆ ನಿಷೇಧಕ್ಕೊಳಗಾಯಿತು. ಒಮ್ಮೆ ಕಾನೂನು ಹೋರಾಟದ ಮೂಲಕ ಇನ್ನೊಮ್ಮೆ ಪ್ರತಿಭಟನೆ ಮೂಲಕ ನಿಷೇಧ ಹಿಂಪಡೆಯಲಾಯಿತು. ಈಗ ಬರುತ್ತಿರುವ ಪ್ರಶ್ನೆಗಳೆಲ್ಲಾ ರಾಜಕೀಯ ಪ್ರೇರಿತವಾದುದು. ಇದನ್ನು ನಾವು ಸಂಘ ಆರಂಭವಾಗಿ 10-15 ವರ್ಷಗಳ ನಂತರದಿಂದಲೇ ಎದುರಿಸುತ್ತಿದ್ದೇವೆ. ಇದಕ್ಕೆ ನಾವು ಒಗ್ಗಿಕೊಂಡಿದ್ದೇವೆ. ಒಂದು ವೇಳೆ ಇಂತಹದ್ದು ನಡೆಯಲಿಲ್ಲ ಎಂದರೆ ಏನೋ ಮಿಸ್ ಹೊಡೆಯುತ್ತಿದೆಯಲ್ಲಾ ಎಂದು ನಾವು ಅನುಮಾನ ಪಡಬೇಕಾಗಿದೆ. ಆದರೆ ಇದೆಲ್ಲಾ ನಮಗೆ ಮಾಮೂಲು. ಹಿಮದೂ ಧರ್ಮವೂ ನೋಂದಣಿಯಾಗಿಲ್ಲ. ಬಹಳಷ್ಟು ವಿಷಯಗಳು ನಮ್ಮ ದೇಶದಲ್ಲಿ ನೋಂದಣಿಯಾಗಿಲ್ಲ. ನಾವು ಸರ್ಕಾರದಿಂದ ಹಣವನ್ನೂ ಪಡೆಯುವುದಿಲ್ಲ’ ಎಂದಿದ್ದಾರೆ.


pic.twitter.com/SvkYhJ9RS5

 

— ????Che_ಕೃಷ್ಣ????????????❤️ (@ChekrishnaCk) June 15, 2026

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ಯುದ್ಧ ವಿಮಾನ ಅಪಘಾತ: ಎಂಟು ಸೇನಾ ಸಿಬ್ಬಂದಿ ದುರ್ಮರಣ