Daily Horoscope

Select Your Language

Notifications

webdunia
webdunia
webdunia
webdunia

ಗ್ಯಾಸ್ ಖಾಲಿ ಎಂದು ವಿಶಿಷ್ಟವಾಗಿ ಪ್ರತಿಭಟಿಸಿದ ಬೆಂಗಳೂರು ಹೋಟೆಲ್ ಮಾಲಿಕ Video

LPG Cylinder crisis
Photo Credit: X
ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಸನ್ನಿವೇಶದಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಕೊರತೆ ಉಂಟಾಗಿದೆ. ಇದೀಗ ಇದೇ ವಿಚಾರವಾಗಿ ಬೆಂಗಳೂರಿನ ಹೋಟೆಲ್ ಒಂದು ವಿಶಿಷ್ಟವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಈಗ ಕಮರ್ಷಿಯಲ್ ಮತ್ತು ಗೃಹಬಳಕೆ ಸಿಲಿಂಡರ್ ಕೊರತೆ ಎದುರಾಗಿದೆ. ಸೂಕ್ತ ಪ್ರಮಾಣದಲ್ಲಿ ಎಲ್ ಪಿಜಿ ಪೂರೈಕೆಯಾಗದೇ ಬಹುತೇಕ ಹೋಟೆಲ್ ಗಳು ಎಂದಿನಂತೆ ಗ್ರಾಹಕರಿಗೆ ಆಹಾರ ತಯಾರಿಸಲು ಸಾಧ್ಯವಾಗುತ್ತಿಲ್ಲ.

ಇದೇ ಕಾರಣಕ್ಕೆ ಬೆಂಗಳೂರಿನ ಹೋಟೆಲ್ ಮಾಲಿಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಹೋಟೆಲ್ ಒಂದರಲ್ಲಿ ಮುಂಭಾಗದಲ್ಲಿಯೇ ಖಾಲಿ ಸಿಲಿಂಡರ್ ಗಳನ್ನು ಇಡಲಾಗಿದ್ದು ಇದರ ಮೇಲೆ ಎಲ್ ಪಿಜಿ ಇಲ್ಲ.. ಆಹಾರವಿಲ್ಲ-ಹೋಟೆಲ್ ಉದ್ಯಮವನ್ನು ಉಳಿಸಿ ಎಂದು ಬೋರ್ಡ್ ಹಾಕಿ ಇಡಲಾಗಿದೆ.

ಬಹುತೇಕ ಹೋಟೆಲ್ ಗಳಲ್ಲಿ ಈಗ ಜನಪ್ರಿಯ ಖಾದ್ಯಗಳಾದ ಪೂರಿ, ಬಜ್ಜಿ, ಗೋಬಿ ಮಂಚೂರಿ ಮೊದಲಾದವುಗಳ ತಯಾರಿ ಸ್ಥಗಿತಗೊಳಿಸಲಾಗಿದೆ. ಹೀಗೇ ಮುಂದುವರಿದರೆ ಹೋಟೆಲ್ ಸಂಪೂರ್ಣವಾಗಿ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎನ್ನುತ್ತಿದ್ದಾರೆ ಮಾಲಿಕರು.

pic.twitter.com/Y3d2WQ8vDd

 

— Deepak Bopanna (@dpkBopanna) March 11, 2026

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಬಂಕ್ ಸಿಬ್ಬಂದಿಯದ್ದು ಎಂಥಾ ಧೈರ್ಯ: ಏನು ಮಾಡಿದ ಈ ವಿಡಿಯೋ ನೋಡಿ