Publish Date: Thu, 15 Mar 2018 (12:00 IST)
Updated Date: Thu, 15 Mar 2018 (14:02 IST)
ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಒಂದೇ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಡಿ ಎಂದು ವೀರಶೈವ ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯನವರನ್ನು ಬೇಟಿ ಮಾಡಿ ಒತ್ತಾಯಿಸಿದೆ.
ಬೆಂಗಳೂರಿನ ಸಿಎಂ ಮನೆಯಲ್ಲೇ ಸಭೆ ನಡೆಸಿದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದ ವೀರಶೈವ ಸ್ವಾಮೀಜಿಗಳ ನಿಯೋಗ ಲಿಂಗಾಯತ ಎನ್ನುವುದು ವೀರಶೈವರಲ್ಲೇ ಒಂದು ಉಪ ಪಂಗಡ ಅಷ್ಟೇ. ಈಗಾಗಲೇ ಸಮಿತಿ ನೀಡಿರವ ವರದಿಯನ್ನು ಅನುಮೋದಿಸಲು ಕೇಂದ್ರಕ್ಕೆ ನೀಡಬೇಡಿ ಎಂದು ಸ್ವಾಮೀಜಿಗಳ ನಿಯೋಗ ಒತ್ತಾಯಿಸಿದೆ.
ವರದಿಯನ್ನು ಇಲ್ಲೇ ಕೈ ಬಿಡುವಂತೆ ಒತ್ತಾಯಿಸಿದ್ದೇವೆ. ಅಗತ್ಯ ಬಿದ್ದರೆ ಇನ್ನೊಂದು ಸಮಿತಿ ನೇಮಿಸುವಂತೆ ಆಗ್ರಹಿಸಿದ್ದೇವೆ ಎಂದು ಸ್ವಾಮೀಜಿಗಳು ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ